ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಹಲವು ಬಡಾವಣೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಪ್ಟೆಂಬರ್ 29ರಂದು ಬೆಳಿಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಮೆಸ್ಕಾಂ ಮಾಹಿತಿಯ ಪ್ರಕಾರ, 220 ಕೆವಿ ಎಂಆರ್‌ಎಸ್ ಮುಖ್ಯ ಸ್ವೀಕರಣಾ ಕೇಂದ್ರದಲ್ಲಿ 66 ಕೆವಿ ಡಿವಿಜಿ-01 ಬಸ್‌ನ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾವರೆಚಟ್ನಹಳ್ಳಿ ಎ ಎ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯ
ಶಿವಬಸವ ನಗರ, ಇಂದಿರಾ ಗಾಂಧಿ ಬಡಾವಣೆ, ಕುವೆಂಪುನಗರ, ಸೂಡಾ ಲೇಔಟ್, ತ್ರಿಮೂರ್ತಿ ನಗರ, ನವುಲೆ, ಮಾರುತಿ ಬಡಾವಣೆ, ಸವಳಂಗ ರಸ್ತೆ, ಸರ್ಜಿ ಕನ್ವೆನ್ಷನ್ ಹಾಲ್, ಎಲ್‌ಬಿಎಸ್ ನಗರ, ಅಶ್ವತ್ಥ ನಗರ, ಕೀರ್ತಿ ನಗರ, ದೇವಂಗಿ 01ನೇ ಹಂತ, ಬಸವೇಶ್ವರ ನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ನಗರ, ಕೃಷಿ ನಗರ 01ನೇ ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪೆಬಲ್ಸ್ ಅಪಾರ್ಟ್‌ಮೆಂಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದರೊಂದಿಗೆ ಶಾಂತಿನಗರ/ರಾಗಿಗುಡ್ಡ, ಪಾಪ್ಯುಲರ್ ರೈಸ್ ಮಿಲ್, ಪೇಸ್ ಕಾಲೇಜ್, ತರಳುಬಾಳು ಬಡಾವಣೆ, ಈಶ್ವರ್ ರೈಸ್ ಮಿಲ್, ಸೇವಾಲಾಲ್ ನಗರ, ತಾವರೆಚಟ್ನಹಳ್ಳಿ ವಡ್ಡರಹಟ್ಟಿ, ವಿಜಯಲಕ್ಷ್ಮಿ ರೈಸ್ ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್ ಯುಜಿಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಳಿಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
