ಶಿವಮೊಗ್ಗ: ಅಡಿಕೆಗೆ ಬಣ್ಣ ,ಕಸ್ತೂರಿ ರಂಗನ್​​ ವರದಿ ವಿಚಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಆಡಳಿತ ಪಕ್ಷಕ್ಕೆ ಸೂಡಾ ಅಧ್ಯಕ್ಷರ ಬಹಿರಂಗ ಸವಾಲು: ಎಚ್.ಎಸ್. ಸುಂದರೇಶ್ ವಾಗ್ದಾಳಿ

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಆಯ್ಕೆ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ಭೇಟಿಯ ನಂತರ ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನ ಕೊನೆಗೂ ಭುಗಿಲೆದ್ದಿದೆ. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ಸ್ವಪಕ್ಷದ ಶಾಸಕರು ಹಾಗೂ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಸಮಾಧಾನದ ಪ್ರಮುಖ ಮುಖ್ಯಾಂಶಗಳು

  • 40 ವರ್ಷಗಳ ಸೇವೆಗೆ ನಿರ್ಲಕ್ಷ್ಯ: ವಿದ್ಯಾರ್ಥಿ ದೆಸೆಯಿಂದ 40 ವರ್ಷ ಪಕ್ಷಕ್ಕಾಗಿ ದುಡಿದರೂ ತಮಗೆ ಯಾವುದೇ ಉನ್ನತ ಹುದ್ದೆ ನೀಡದೆ, ಕಾಡಾ ಅಧ್ಯಕ್ಷತೆಯ ನಂತರ ಈಗ ‘ಕಿತ್ತೋಗಿರೋ ಸೂಡಾ’ ಹುದ್ದೆ ನೀಡಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
  • ಸಚಿವರ ಬೆಂಬಲಿಗರ ವಿರುದ್ಧ ಆರೋಪ: ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರೊಬ್ಬರು ತಮ್ಮ ಕಚೇರಿಗೆ ಬಂದು 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
  • ಮುಂಬರುವ ಚುನಾವಣೆಯ ಎಚ್ಚರಿಕೆ: ಮುಂಬರುವ ಚುನಾವಣೆಯಲ್ಲಿ ಸೂಕ್ತ ನಾಯಕರಿಗೆ ಟಿಕೆಟ್ ನೀಡದಿದ್ದರೆ ಹಾಗೂ ಪಕ್ಷದಲ್ಲಿರುವ ಕಿರಿಕಿರಿಗಳನ್ನು ಸರಿಪಡಿಸದಿದ್ದರೆ ತಾವು ಸೇರಿದಂತೆ ಬೆಂಬಲಿಗರು ಪಕ್ಷ ತೊರೆಯುವುದಾಗಿ ಎಚ್ಚರಿಸಿದ್ದಾರೆ.

ಪಿಡಿಎಫ್​ನಲ್ಲಿರುವ ಪ್ರಮುಖ 5 ಸುದ್ದಿಗಳು

1. ಮೊಬೈಲ್ ಸ್ಕ್ರೀನ್ ಗಾರ್ಡ್‌ಗಳಿಗೂ BIS ಕಡ್ಡಾಯ (2027ರ ಏಪ್ರಿಲ್ 1ರಿಂದ ಜಾರಿ):

 ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಮಾರ್ಟ್‌ಫೋನ್‌ಗಳ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ‘ಭಾರತೀಯ ಮಾನಕ ಬ್ಯೂರೋ’ (BIS) ಕಡ್ಡಾಯ ನೋಂದಣಿ ವ್ಯವಸ್ಥೆಯ ವ್ಯಾಪ್ತಿಗೆ ತಂದಿದ್ದು, 2027ರ ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

2. ಕೊಲೆ ಯತ್ನ ಪ್ರಕರಣ: ಶಾಸಕ ಬಿ.ಕೆ. ಸಂಗಮೇಶ್ ಸೇರಿ ಐವರು ಖುಲಾಸೆ: 2010ರಲ್ಲಿ ಭದ್ರಾವತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಕ್ಷ್ಯಾಧಾರಗಳ ಕೊರತೆ ಮತ್ತು ತನಿಖೆಯ ಲೋಪಗಳನ್ನು ಪರಿಶೀಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಹಾಗೂ ಅವರ ಕುಟುಂಬದವರನ್ನು ಖುಲಾಸೆಗೊಳಿಸಿದೆ.

3. ಕಸ್ತೂರಿ ರಂಗನ್ ವರದಿ: ಸರ್ವೇ ನಂಬರ್ ಮಟ್ಟದಲ್ಲಿ ಪರಿಶೀಲನೆಗೆ ಡಾ. ಧನಂಜಯ ಸರ್ಜಿ ಆಗ್ರಹ: 

ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ, ಕೇವಲ ಉಪಗ್ರಹ ನಕ್ಷೆ ನೆಚ್ಚಿಕೊಳ್ಳದೆ ಕೃಷಿಭೂಮಿ ಹಾಗೂ ಜನವಸತಿ ಪ್ರದೇಶಗಳನ್ನು ಸರ್ವೇ ನಂಬರ್ ಮಟ್ಟದಲ್ಲಿ ಭೌತಿಕವಾಗಿ ಪರಿಶೀಲಿಸಿ ವೈಜ್ಞಾನಿಕ ಪ್ರಸ್ತಾವನೆ ಸಲ್ಲಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

4. ಅಡಕೆಗೆ ರಾಸಾಯನಿಕ ಬಣ್ಣ ಬಳಸಿದರೆ ಕಠಿಣ ಕಾನೂನು ಕ್ರಮ: 

ಅಡಕೆಗೆ ಕೃತಕ ಹಾಗೂ ಕ್ಯಾನ್ಸರ್ ಕಾರಕ ಕೆಂಪು ರಾಸಾಯನಿಕ ಬಣ್ಣ ಬಳಸಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

5. 4 ರಾಜ್ಯಗಳ ವಿಧಾನ ಪರಿಷತ್ ಚುನಾವಣೆಗೆ ವೇಳಾಪಟ್ಟಿ ಪ್ರಕಟ:

ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ 23ರಂದು ಮತದಾನ ನಡೆಯಲಿದೆ.

ಇ ಮೇಲಿನ ಎಲ್ಲಾ ಸುದ್ದಿಗಳು ಸಂಪೂರ್ಣ ಮಾಹಿತಿಗಾಗಿ  (ಇ-ಲಿಂಕ್​) ಕ್ಲಿಕ್​ ಮಾಡಿ 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor