ಶಿವಮೊಗ್ಗ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ 82ನೇ ವರ್ಷದ ಗಣೇಶೋತ್ಸವ ಸಂಭ್ರಮ: ಹೊಸ ಹಾಡು ಬಿಡುಗಡೆ, ಏನೆಲ್ಲಾ ಕಾರ್ಯಕ್ರಮ ಇರಲಿದೆ ?

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದ ಗಣೇಶೋತ್ಸವದ ಪ್ರಯುಕ್ತ ಎಐ ನಿರ್ಮಿತವಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು
ಶಿವಮೊಗ್ಗದ ಗಣೇಶೋತ್ಸವದ ಪ್ರಯುಕ್ತ ಎಐ ನಿರ್ಮಿತವಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ವೀರ ಸಾವರ್ಕರ್ ಹಿಂದೂ ಸಂಘಟನಾ ಮಹಾಮಂಡಳ ವತಿಯಿಂದ 82 ನೇ ವರ್ಷದ ಗಣೇಶೋತ್ಸವವನ್ನು ಸೆಪ್ಟಂಬರ್ 14 ರಿಂದ 25 ರ ವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಸಂಘಟನೆಯ ನಿರ್ದೇಶಕ ಪಿ ಎಂ ಮಾಲತೇಶ ಹೇಳಿದರು

ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಣೇಶೋತ್ಸವದ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಗಣೇಶೋತ್ಸವದ ಅಂಗವಾಗಿ,  ದಿನಾಂಕ 14-09-2026 ಸೋಮವಾರ ಬೆಳಿಗ್ಗೆ 11-30 ಗಂಟೆಗೆ ಸರಿಯಾಗಿ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗುವುದು.

 ದಿನಾಂಕ 14-09-2026ನೇ ಸೋಮವಾರ ಶ್ರೀ ಮಹಾಗಣಪತಿಯ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ದಿನಾಂಕ 15-09-2026ನೇ ಮಂಗಳವಾರ ಸ್ನೇಹ ಸಮ್ಮಿಲನ ಕಲಾತಂಡ ಶಿವಮೊಗ್ಗ, ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಇದನ್ನು ರೂಪಾಕಾರಿಬಸಯ್ಯ ಮತ್ತು ಶ್ಯಾಮಲಾಸತೀಶ ಅವರು ಆಯೋಜಿಸಿದ್ದಾರೆ. 

ದಿನಾಂಕ 16-09-2026ನೇ ಬುಧವಾರ ಶ್ರೀ ಮಹಾಗಣಪತಿ ಯಕ್ಷಗಾನ ಬಳಗ (ರಿ.) ಶಿವಮೊಗ್ಗ, ಇವರಿಂದ ಯಕ್ಷಗಾನ ಪೌರಾಣಿಕ ಪ್ರಸಂಗ ಜರುಗಲಿದೆ.ದಿನಾಂಕ 17-09-2026ನೇ ಗುರುವಾರ ರಾಜಶೇಖರ್ ಮತ್ತು ಸಂಗಡಿಗರು, ಶಿವಮೊಗ್ಗ, ಇವರಿಂದ “ರಸಮಂಜರಿ” ಕಾರ್ಯಕ್ರಮವಿರುತ್ತದೆ. ದಿನಾಂಕ 18-09-2026ನೇ ಶುಕ್ರವಾರ ಯಕ್ಷಾನುಗ್ರಹ ಸಂಸ್ಕೃತಿ ಸಂವರ್ಧನಾ ಸಭಾ (ರಿ.) ಇವರಿಂದ ಯಕ್ಷಗಾನ ಪ್ರಸಂಗ ನಡೆಯಲಿದೆ. ದಿನಾಂಕ 19-09-2026ನೇ ಶನಿವಾರ ಚಲನಚಿತ್ರ ನಟರು ಹಾಗೂ ಜಾನಪದ ಕಲಾವಿದರಾದ ಶ್ರೀ ಗುರುರಾಜ ಹೊಸಕೋಟೆ ತಂಡ, ಬೆಂಗಳೂರು, ಇವರಿಂದ ಜಾನಪದ ಸಂಭ್ರಮ ಮೂಡಿಬರಲಿದೆ. 

ದಿನಾಂಕ 20-09-2026ನೇ ಭಾನುವಾರ “ಯಕ್ಷಕಲಾ ಪ್ರತಿಷ್ಠಾನ (ರಿ) ಕೆಳಕುಂಜಲು-ನೀಲಾವರ” ಇವರಿಂದ ಯಕ್ಷಗಾನ ಪೌರಾಣಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ. ದಿನಾಂಕ 21-09-2026ನೇ ಸೋಮವಾರ “ಶಾವರೀಶ ನಾಟ್ಯಕೇಂದ್ರ, ಹಾವೇರಿ ಹಾಗೂ “ಶ್ರೀಮತಿ ಶೃತಿ ಜೋಶಿ” ಮತ್ತು ತಂಡದವರಿಂದ ಭರತನಾಟ್ಯ ಪ್ರಸ್ತುತಗೊಳ್ಳಲಿದೆ.

ದಿನಾಂಕ 22-09-2026ನೇ ಮಂಗಳವಾರ ಶ್ರೀಮತಿ ಪುಷ್ಪಲತಾ ಮತ್ತು ಸಂಗಡಿಗರು ಶಿವಮೊಗ್ಗ, ಇವರಿಂದ ಸುಗಮ ಸಂಗೀತ ಜರುಗಲಿದೆ. ದಿನಾಂಕ 23-09-2026ನೇ ಬುಧವಾರ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಸಂಘ, ಧಾರ್ಮೇಶ್ವರ, ಇವರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗ ನಡೆಯಲಿದೆ. ದಿನಾಂಕ 24-09-2026ನೇ ಗುರುವಾರದಂದು ವೀರ ಶಿವಮೂರ್ತಿಯವರ ಪುಣ್ಯ ಸ್ಮರಣೆ ಹಾಗೂ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಲಿವೆ. ಅಂತಿಮವಾಗಿ ದಿನಾಂಕ 25-09-2026ನೇ ಶುಕ್ರವಾರ ಬೆಳಿಗ್ಗೆ 9-30ಕ್ಕೆ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಮತ್ತು ವಿಸರ್ಜನೆಯೊಂದಿಗೆ ಗಣೇಶೋತ್ಸವವು ಸಂಪನ್ನಗೊಳ್ಳಲಿದೆ. ಎಂದರು.

ರಾಮ್ ಕದಂ ರಿಂದ ಗಣೇಶೋತ್ಸವಕ್ಕೆ ಹೊಸ ಹಾಡು

ಈ ಬಾರಿಯ ಗಣೇಶೋತ್ಸವಕ್ಕೆ ರಾಮ್ ಕದಂ ಎಂಬುವವರು ai ಟೆಕ್ನಾಲಜಿ ಮೂಲಕ ಹೊಸ ಹಾಡೊಂದನ್ನು ಸಂಯೋಜಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ನಾನು ಹಿಂದೂ ಮಹಾ ಸಭಾ ಗಣಪತಿಯ ರಾಜ ಬೀದಿ ಉತ್ಸವಕ್ಕೆ ಮೆರಗು ನೀಡುವಂತಹ ಉತ್ತಮವಾದ ಹಾಡೊಂದನ್ನು  ರಚಿಸಿದ್ದೇನೆ.  ಇದನ್ನು ಸಂಪೂರ್ಣವಾಗಿ ai ಮೂಲಕ ಸೋಮ್ಯೋಜಿಸಿದ್ದು. ಇದನ್ನು ಸಂಯೋಜಿಸುವಾಗ ಅನೇಕ ಸವಾಲುಗಳು ಎದುರಾದವು. Ai  ಟೆಕ್ನಾಲಜಿ ಎಂಬುವುದು ನಾವೊಂದು ಹೇಳಿದರೇ ಆದೊಂದು ಮಾಡುತ್ತದೆ. ಗಾಯಕನ ಬಳಿ ಹಾಡಿಸಿದರೆ  ಯಾವರೀತಿ ಹಾಡು ಹಾಡಬೇಕೆಂಬ ವಿವೇಚನೆ ಆತನಿಗೆ ಇರುತ್ತದೆ. . ಆದರೆ ನಲ್ಲಿ ಆ ರೀತಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಸರಿ ಹೊಂದುವ ಪ್ರಾಂಪ್ಟ್ ಅನ್ನು ನಾವು ಕಲಿತು ಕೊಟ್ಟಾಗ ಮಾತ್ರ ಅದು ಸರಿಯಾಗಿ ಹಾಡನ್ನು ಸಂಯೋಜಿಸಿ ಕೊಡುತ್ತದೆ. ಆ ಮೂಲಕ ನಮಗೆ ಸಂತೃಪ್ತಿ ಗೊಳ್ಳುವ ರೀತಿಯಲ್ಲಿ  ಸಾಂಗ್ ಅನ್ನು ರೆಡಿ ಮಾಡಿ ಕೊಟ್ಟಿದೆ ಎಂದರು.

ಹಾಗೆಯೇ ಇದು ನನ್ನ ಎರಡನೇ ಹಾಡಾಗಿದೆ. ಈ ಹಾಡು ಈಗಾಗಲೇ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಮೊದ ಗಣಪ ಎಂದು ಸರ್ಚ್ ಮಾಡಿದರೆ ಯುಟ್ಯೂಬ್ ನಲ್ಲಿ ಸಿಗುತ್ತದೆ ಎಂದರು

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor