ಶಿವಮೊಗ್ಗ: ಬುಕ್ ಓದಿದರೆ ಹಣ ಬರುತ್ತದೆ ಎಂದು ನಂಬಿಸಿ ಮಹಿಳೆಗೆ 3.33 ಲಕ್ಷ ವಂಚನೆ!

ಹಂಚಿಕೊಳ್ಳಿ
WhatsApp Facebook X Telegram
Shivamogga Cyber Fraud Shivamogga Cyber ScamThirthahalli Shivamogga Cyber Crime
Shivamogga Cyber Fraud Shivamogga Cyber ScamThirthahalli Shivamogga Cyber Crime

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಪುಸ್ತಕ ಓದುವುದರ ಮೂಲಕ ಹಾಗೂ ಇನ್ವೆಸ್ಟ್ ಮಾಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ (shivamogga cyber fraud case) ದಾಖಲಾಗಿದೆ.

ಘಟನೆಯ ವಿವರ

ಮಹಿಳೆಗೆ ಅವರ ದೂರದ ಸಂಬಂಧಿಯೊಬ್ಬರು ಕರೆ ಮಾಡಿ, Future Book See Technology Ltd ಕಂಪನಿಯ FBT ಎಂಬ ಆಪ್‌ ಕುರಿತು ಮಾಹಿತಿ ನೀಡಿದ್ದಾರೆ. ಈ ಆಪ್ ಮೂಲಕ ಹಣ ಹೂಡಿಕೆ ಮಾಡಿ ಪುಸ್ತಕಗಳನ್ನು ಓದಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿ, ಆಪ್ ಜಾಯಿನ್ ಆಗಲು ಲಿಂಕ್ ಒಂದನ್ನು ಕಳುಹಿಸಿದ್ದಾರೆ.ಬಳಿಕ ದೂರುದಾರ ಮಹಿಳೆ ಆಪ್ ಮೂಲಕ ಪುಸ್ತಕಗಳನ್ನು ಓದಲು ಹಣ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಆರಂಭದ ಒಂದೆರಡು ಬಾರಿ ಹೂಡಿಕೆ ಮಾಡಿದಾಗ ಸ್ವಲ್ಪ ಪ್ರಮಾಣದ ಹಣ ಮಹಿಳೆಯ ಖಾತೆಗೆ ವಾಪಸ್ ಬಂದು ಲಾಭದ ರೂಪದಲ್ಲಿ ಜಮೆಯಾಗಿದೆ. ಇದನ್ನು ನಿಜವೆಂದು ನಂಬಿದ ಮಹಿಳೆ, ವಂಚಕರು ನೀಡಿದ ವಿವಿಧ ಯುಪಿಐ ಐಡಿಗಳಿಗೆ ಹಂತ-ಹಂತವಾಗಿ ಒಟ್ಟು 3,33,150 ರೂಪಾಯಿ ಗಳಷ್ಟು ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಆದರೆ, ಕಳೆದ ಒಂದು ತಿಂಗಳಿನಿಂದ ಅವರು ಹೂಡಿಕೆ ಮಾಡಿದ ಮೂಲ ಹಣವಾಗಲಿ ಅಥವಾ ಲಾಭವಾಗಲಿ ವಾಪಸ್ ಬಾರದಿದ್ದಾಗ ಮಹಿಳೆಗೆ ಅನುಮಾನ ಮೂಡಿದೆ. ಈ ವಿಷಯವನ್ನು ತಮ್ಮ ಪತಿಯ ಬಳಿ ತಿಳಿಸಿದಾಗ ತಾವಿಬ್ಬರೂ ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಫ್ಯೂಚರ್ ಬುಕ್ ಸೀ ಟೆಕ್ನಾಲಜಿ ಲಿಮಿಟೆಡ್ ಕಂಪನಿ ಹೆಸರು ಬಳಸಿ, FBT ಆಪ್ ಮೂಲಕ ಬುಕ್ ರೀಡಿಂಗ್ ಹೆಸರಿನಲ್ಲಿ 3,33,150 ಹಣ ಪಡೆದು ವಂಚಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ತಮ್ಮ ಹಣವನ್ನು ವಾಪಸ್ ಕೊಡಿಸಬೇಕೆಂದು ಸಂತ್ರಸ್ತೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor