ಎದೆಗೆ ಇರಿದು ಕುಳ್ಳಿ ಕಿರಣ್​ನ​ ಕೊಲೆ! ಗ್ಯಾಂಗ್​ ವಾರ್​ ಕಾರಣವಲ್ಲ! ಎಸ್​ಪಿ ನಿಖಿಲ್ ಹೇಳಿದ್ದೇನು!

ಹಂಚಿಕೊಳ್ಳಿ
WhatsApp Facebook X Telegram
Shivamogga SP Nikhil B Confirms Kulli Kiran Murder Over Financial Dispute
Shivamogga SP Nikhil B Confirms Kulli Kiran Murder Over Financial Dispute

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಮೇನಕೊಪ್ಪ ದಲ್ಲಿ ನಡೆದ ಘಟನೆಯಲ್ಲಿ ಚಾಕು ಇರಿತ ಪ್ರಕರಣದಲ್ಲಿ ಸೀಗೆಹಟ್ಟಿ ಮೂಲದ ಕಿರಣ್​ ಸಾವನಪ್ಪಿದ್ದಾರೆ. ಈ ಬಗ್ಗೆ ಮಾಧ್ಯಮ ವಾಟ್ಸಾಪ್ ಗ್ರೂಪ್​ನಲ್ಲಿ ಸಂದೇಶ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. (Shivamogga SP Nikhil B),ಶಿವಮೊಗ್ಗ ನಗರದ ರಾಮೇನಕೊಪ್ಪ ಪ್ರದೇಶದಲ್ಲಿ ಕುಳ್ಳಿ ಕಿರಣ್ (32) ಎಂಬಾತನ ಹತ್ಯೆ ನಡೆದಿರುವುದನ್ನುಖಚಿತಪಡಿಸಿದ್ದಾರೆ. ವೈಯಕ್ತಿಕ ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವೈಷಮ್ಯದ ಹಿನ್ನೆಲೆಯಲ್ಲಿ ಕಿರಣ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ 2ರಿಂದ 3 ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಅವರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಆರೋಪಿಗಳ ಕುರಿತು ಹಾಗೂ ಕೊಲೆಗೆ ಕಾರಣವಾದ ಹಣಕಾಸು ವ್ಯವಹಾರದ ಸ್ವರೂಪದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ ಎಂದು ತಿಳಿಸಿದ್ದಾರೆ.

ರಾಮೇನಕೊಪ್ಪದ ಬಳಿ ಕುಳ್ಳಿ ಕಿರಣ್​ನ ಎದೆಗೆ ಮಾರಕಾಸ್ತ್ರದಿಂದ ಎರಡು ಬಾರಿ ಇರಿಯಲಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದಾನೆ. ಇನ್ನೂ ಡಿಯೋ ಉಮೇಶ್ ಮತ್ತಾತನ ಕಡೆಯವರು ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೇಲಾಗಿ ಇದೊಂದು ರೌಡಿ ವಲಯದ ಗ್ಯಾಂಗ್​ ವಾರ್​ ಟಾರ್ಗೆಟ್ ಎನ್ನಲಾಗಿತ್ತು.

ಆದರೆ ಮಲೆನಾಡು ಟುಡೆಗೆ ಈ ಬಗ್ಗೆಯು ಸ್ಪಷ್ಟಪಡಿಸಿರುವ ಎಸ್​ಪಿ ನಿಖಿಲ್ ಪ್ರಾಥಮಿಕ ಹಂತದಲ್ಲಿ ಹಣಕಾಸಿನ ವಿಚಾರಕ್ಕೆ ನಡೆದ ಘಟನೆ ಎಂಬ ಮಾಹಿತಿ ಇದೆ. ಉಳಿದಂತೆ ಯಾವುದೆ ಗ್ಯಾಂಗ್ ವಾರ್ ಬಗ್ಗೆ ಇದುವರೆಗೂ ಸ್ಪಷ್ಟವಾಗಿಲ್ಲ. ಹಾಗೊಂದು ಆ ರೀತಿಯಲ್ಲಿ ಮಾಹಿತಿ ಇದ್ದರೆ ತಿಳಿಸುವುದಾಗಿ ಹೇಳಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor