ಟೈಲ್ಸ್ ಸಾಗಿಸುತ್ತಿದ್ದ ಉರುಳಿದ ಟಾಟಾ ಏಸ್! ವಾಹನದ ಹಿಂಬದಿಯಲ್ಲಿದ್ದ ವ್ಯಕ್ತಿ ಸಾವು

ಹಂಚಿಕೊಳ್ಳಿ
WhatsApp Facebook X Telegram
ಸಾಗರ ಸುದ್ದಿ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಸಾಗರ / ಜಿಲ್ಲೆಯ ಸಾಗರ ತಾಲ್ಲೂಕುನಲ್ಲೊಂದು ದುರ್ಘಟನೆ ನಡೆದಿದೆ. ಇದನ್ನ ದುರ್ವಿಧಿಯನ್ನದೆ ಬೇರೆ ವಿಧಿಯಿಲ್ಲ. ತಮ್ಮ ಪಾಡಿಗೆ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಅದೇ ಟಾಟಾ ಏಸ್ ವಾಹನ ಉರುಳಿ ಸಾವನ್ನಪ್ಪಿದ್ದಾರೆ. ಹೌದು, ಟೈಲ್ಸ್ ಹೇರಿಕೊಂಡು ಸಾಗುತ್ತಿದ್ದ ಟಾಟಾ ಏಸ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಪರಿಣಾಮ ವಾಹನದ ಹಿಂಭಾಗದಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಳಗುಪ್ಪ ಸಮೀಪದ ಬಲೇಗಾರ್ ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ.

ಟೈಲ್ಸ್ ತುಂಬಿಕೊಂಡಿದ್ದ ಟಾಟಾ ಏಸ್ ವಾಹನ ತಾಳಗುಪ್ಪ (Talaguppa) ಕಡೆಗೆ ಸಾಗುತ್ತಿತ್ತು. ಬಲೇಗಾರ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಗೆ ಉರುಳಿದೆ. ವಾಹನ ಉರುಳಿದ ಸಂದರ್ಭದಲ್ಲಿ ಅದರ ಹಿಂಭಾಗದಲ್ಲಿದ್ದ ವ್ಯಕ್ತಿ ಟೈಲ್ಸ್‌ಗಳ ಕೆಳಗೆ ಸಿಲುಕಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಹಜರ್ ಮುಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor