ಶ್ರಾವಣ ವಿಶೇಷ! ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲದಯಲ್ಲಿ ತಿಂಗಳು ಪೂರ್ತಿ ವಿಶೇಷವಿದೆ!

ಹಂಚಿಕೊಳ್ಳಿ
WhatsApp Facebook X Telegram
Kote Sitaramanjaneya Temple
Kote Sitaramanjaneya Temple

Kote Sri Seetharamanjaneya Temple / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಸುಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನವನ್ನ ಬಿ ಶ್ರೇಣಿಯಿಂದ ಎ ಶ್ರೇಣಿಗೆ (ಗ್ರೇಡ್) ಮೇಲ್ದರ್ಜೆಗೇರಿಸುವ ಪ್ರಯತ್ನ ಆರಂಭವಾಗಿದೆ. ಅಲ್ಲದೆ ಶ್ರಾವಣ ಪ್ರಯುಕ್ತ ವಿಶೇಷ ಪೂಜೆಗಳನ್ನ ನಡೆಸಲಾಗುತ್ತಿದೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಹಿತಿ ನೀಡಿದೆ.

ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನದಲ್ಲಿ ತಿಂಗಳಾನುಗಟ್ಟಲೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಶ್ರಾವಣದಲ್ಲಿ ಒಟ್ಟು ನಾಲ್ಕು ಶನಿವಾರ ಬರಲಿದ್ದು, ಆಂಜನೇಯ ಸ್ವಾಮಿಗೆ ಸುಗ್ರೀವ ಪಟ್ಟಾಭಿಷೇಕ, ಸೀತಾ ಮುದ್ರಿಕಾ ಪ್ರದಾನ ಸೇರಿದಂತೆ ವಿವಿಧ ಬಗೆಯ ನಯನಮನೋಹರ ವಿಶೇಷ ಅಲಂಕಾರ ಹಮ್ಮಿಕೊಳ್ಳಲಾಗಿದೆ.

ಪ್ರತೀ ಶನಿವಾರ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಇರಲಿದೆ. ಶ್ರಾವಣ ಮಾಸದ ಕಡೆಯ ಶನಿವಾರ ಸ್ವಾಮಿಗೆ ವಿಶೇಷವಾಗಿ ತಿರುಪತಿ ವೆಂಕಟರಮಣ ಅಲಂಕಾರಕ್ಕೆ ತೀರ್ಮಾನಿಸಲಾಗಿದ್ದು, ಭಕ್ತಾದಿಗಳಿಗೆ ವಿಶೇಷ ಲಡ್ಡು ಪ್ರಸಾದವನ್ನು ವಿತರಿಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಕೆ. ದೇವೇಂದ್ರಪ್ಪ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಪ್ರಸಾದ್, ದೇವಸ್ಥಾನ ಸಮಿತಿಯ ಪ್ರಮುಖ ಪದಾಧಿಕಾರಿಗಳಾದ ಎ.ಎಚ್. ಸುನಿಲ್, ಶ್ರೀಧರ ಮೂರ್ತಿ ನವಿಲೆ, ಎಸ್.ಟಿ. ಚಂದ್ರಶೇಖರ್, ರೇಖಾ ರಂಗನಾಥ್, ಆರ್. ರಾಜಶೇಖರ್, ಹೆಚ್.ಎಸ್. ಬಾಲಾಜಿ ಶೆಟ್ಟಿ, ರೂಪ ಹಾಗೂ ಸುಧಾ ಅವರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor