Scorpio Car ಸಾಗರ : ನಗರದ ಗಣಪತಿ ಕೆರೆಯಿಂದ ಆಗ್ರಹಾರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ತಿರುವಿನಲ್ಲಿ ಸ್ಕಾರ್ಪಿಯೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್‌ನ 65ನೇ ಸಂಸ್ಥಾಪನಾ ದಿನಾಚರಣೆ: ಯುವಶಕ್ತಿಗೆ ನಾಯಕರ ಕರೆ!
ಗಣಪತಿ ಕೆರೆಯ ದಂಡೆಯ ಸಮೀಪವಿರುವ ತಿರುವಿನಲ್ಲಿ ಈ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್ ಹಾಗೂ ಕೆರೆಯ ತಡೆಗೋಡೆಯ ನಡುವೆ ಇರುವ ಚಾನಲ್‌ಗೆ ಕಾರು ಉರುಳಿ ಬಿದ್ದಿದೆ.ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಪಲ್ಟಿಯಾಗಿ ಬಿದ್ದಿರುವುದು ಸ್ಥಳದಲ್ಲಿ ಕಂಡುಬಂದಿದೆ.
ವಾಹನವು ವಿದ್ಯುತ್ ಟಿ.ಸಿ. ಮತ್ತು ತಡೆಗೋಡೆಯ ನಡುವಿನ ಇಕ್ಕಟ್ಟಾದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಘಟನೆ ನಡೆದಿರುವ ರೀತಿಯನ್ನು ಗಮನಿಸಿದಾಗ ದೊಡ್ಡ ಮಟ್ಟದ ಅನಾಹುತ ಸಂಭವಿಸಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಅಪಘಾತಕ್ಕೀಡಾದ ಕಾರು ಯಾರಿಗೆ ಸೇರಿದ್ದು, ಘಟನೆಯ ಸಂದರ್ಭದಲ್ಲಿ ವಾಹನದಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಹಾಗೂ ಯಾರಿಗಾದರೂ ಗಾಯಗಳಾಗಿವೆಯೇ ಎಂಬ ವಿಚಾರದ ಬಗ್ಗೆ ಸದ್ಯಕ್ಕೆ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕಾರಿನೊಳಗೆ ಪ್ರಯಾಣಿಕರು ಪತ್ತೆಯಾಗಿಲ್ಲ.
