Actor Ramesh Bhat ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಗರದ ಪ್ರಸಿದ್ಧ ಜೋಗ ಜಲಪಾತವು ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದ್ದು, ಅದನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರ ನಡುವೆ, ಹಿರಿಯ ನಟ ರಮೇಶ್ ಭಟ್ ಅವರು ನಿನ್ನೆ ಜೋಗ ಜಲಪಾತವನ್ನು ವೀಕ್ಷಿಸಿದ್ದಾರೆ.
ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣ: ಜಮೀನು ಪರಿಶೀಲನೆ
ಹೌದು, ಈ ಹಿಂದೆ ಶಂಕರ್ ನಾಗ್ ಹಾಗೂ ಅನಂತ್ ನಾಗ್ ಅವರ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹಿರಿಯ ನಟ ರಮೇಶ್ ಭಟ್ ಅವರು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಜೋಗಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಸಹನಟರೊಂದಿಗೆ ಜೋಗ ಜಲಪಾತಕ್ಕೆ ಭೇಟಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗೈಡ್ ಒಬ್ಬರು, ಜಲಪಾತದ ನೀರು ಎಷ್ಟು ಅಡಿಯಿಂದ ಬೀಳುತ್ತದೆ, ಈ ಜಲಪಾತದ ನಾಲಕ್ಕು ಧಾರೆಗಳಿಗೆ ರಾಜ, ರಾಣಿ, ರೋರರ್, ರಾಕೆಟ್ ಎಂದು ಕರೆಯಲು ಕಾರಣವೇನು ಹಾಗೂ ಇಲ್ಲಿರುವ ಪ್ರವಾಸಿ ತಾಣಗಳನ್ನು ಯಾರು, ಯಾವಾಗ ನಿರ್ಮಿಸಿದರು ಎನ್ನುವ ಎಲ್ಲಾ ವಿವರಗಳನ್ನು ನೀಡಿದರು. ರಮೇಶ್ ಭಟ್ ಅವರು ಚಿತ್ರೀಕರಣದ ಮೇಕಪ್ನಲ್ಲಿಯೇ ನಿಂತು ಗೈಡ್ ಹೇಳುತ್ತಿದ್ದ ವಿವರಗಳನ್ನು ಅತ್ಯಂತ ಕುತೂಹಲದಿಂದ ಕೇಳಿಸಿಕೊಂಡರು.
