ಜೋಗವನ್ನೆ ಹತ್ತಿ ಇಳಿವ ಸ್ಪೈಡರ್ ಮ್ಯಾನ್​ ಜ್ಯೋತಿರಾಜ್​ಗೆ ವಿವಾಹ!

ಹಂಚಿಕೊಳ್ಳಿ
WhatsApp Facebook X Telegram
SpiderMan Jyothiraj
SpiderMan Jyothiraj

SpiderMan Jyothiraj / ಮಲೆನಾಡು ಟುಡೆ ಸುದ್ದಿ / ಚಿತ್ರದುರ್ಗ / ಸ್ಪೈಡರ್ ಮ್ಯಾನ್, ಮಂಕಿ ಮ್ಯಾಮ್​, ಕೋತಿರಾಜ್ ಎಂದೇ ಫೇಮಸ್ ಆಗಿರುವ ಚಿತ್ರದುರ್ಗದ ಜ್ಯೋತಿರಾಜ್​ ಇದೀಗ ವಿವಾಹ ಸಂಭ್ರಮದಲ್ಲಿದ್ದಾರೆ. ವಿಶ್ವ ವಿಖ್ಯಾತ ಜೋಗ ಜಲಪಾತದ ರಾಜಬಂಡೆಯಿಂದ ನೇರವಾಗಿ ಬರಿಗೈಲಿ ಕೆಳಕ್ಕೆ ಇಳಿದ ಸಾಹಸಿಗ ಈ ಜ್ಯೋತಿರಾಜ್.. ತನ್ನ ಅದ್ಭುತ ಸಾಹಸಗಳಿಂದಲೇ ವಿಶ್ವಮೆಚ್ಚುವಂತೆ ಮಾಡಿದ ಜ್ಯೋತಿರಾಜ್​ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ತಮ್ಮ ಅಕ್ಕನ ಮಗಳಾಗಿರುವ ನಿವೇದಿತಾರನ್ನ ಇದೇ ಆಗಸ್ಟ್ 22 ಮತ್ತು 23ರಂದು ಚಿತ್ರದುರ್ಗ ನಗರದಲ್ಲಿ ನಡೆಯುವ ವಿವಾಹ ಮಹೋತ್ಸವದಲ್ಲಿ ವರಿಸಲಿದ್ದಾರೆ. ಕಲ್ಲಿನ ಕೋಟೆ, ಬೃಹತ್ ಬಂಡೆಗ ಹಾಗೂ ಎತ್ತರದ ಗುಡ್ಡಗಳನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಏರುವ ಅಪ್ರತಿಮ ಸಾಮರ್ಥ್ಯ ಹೊಂದಿರುವ ಜ್ಯೋತಿರಾಜ್ ರನ್ನ ಇದುವರೆಗೂ ಹಲವು ರಾಜ್ಯಗಳು ಸನ್ಮಾನಿಸಿದೆ.

ಜೋಗ ಜಲಪಾತ ಸೇರಿದಂತೆ ನಾಡಿನ ವಿವಿಧ ಬೆಟ್ಟ ಗುಡ್ಡಗಳಲ್ಲಿ ಚಾರಣ ಮಾಡುವಾಗ ಆಯತಪ್ಪಿ ಬಿದ್ದ ಅಥವಾ ದಾರಿ ತಪ್ಪಿದ ಹಲವಾರು ಜನರ ಪ್ರಾಣ ರಕ್ಷಿಸುವ, ಮೃತದೇಹಗಳನ್ನ ಹೊರತೆಗೆಯುವ ಕೆಲಸಕ್ಕೆ ನೆರವಾಗುತ್ತಿದ್ದ ಜ್ಯೋತಿರಾಜ್​ಗೆ ಮದುವೆಯ ಶುಭಾಶಯಗಳು ವ್ಯಕ್ತವಾಗುತ್ತಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor