Youth Congress ಶಿವಮೊಗ್ಗ : ಯುವ ಕಾಂಗ್ರೆಸ್ನ ಸಂಸ್ಥಾಪನ ದಿನಾಚರಣೆಯನ್ನು ಆಗಸ್ಟ್ 09 ರಂದು ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಶಿವಮೊಗ್ಗ : ಮಳೆ ಆರ್ಭಟ, ತುಂಗಾ ಜಲಾಶಯದ ಒಳಹರಿವು ಹೊರಹರಿವು ಎಷ್ಟಿದೆ ಇವತ್ತು ?
ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ಯುವ ಕಾಂಗ್ರೆಸ್ ಇದು ಕೇವಲ ಒಂದು ಸಂಘಟನೆಯ ಸಂಸ್ಥಾಪಕ ದಿನವಲ್ಲ.ಇದು ದೇಶದ ಯುವಕರ ಧ್ವನಿಗೆ ರಾಜಕೀಯ ವೇದಿಕೆ ದೊರೆತ ದಿನ.ಇದು ಯುವಕರ ಕನಸು, ಹೋರಾಟ, ಶಕ್ತಿ ಮತ್ತು ನಾಯಕತ್ವಕ್ಕೆ ದಿಕ್ಕು ತೋರಿದ ದಿನ.ಯುವ ಕಾಂಗ್ರೆಸ್ ಎಂದರೆ ಕೇವಲ ಒಂದು ಸಂಘಟನೆಯ ಹೆಸರು ಅಲ್ಲ.ಯುವ ಕಾಂಗ್ರೆಸ್ ಎಂದರೆ ಹೋರಾಟ.ಯುವ ಕಾಂಗ್ರೆಸ್ ಎಂದರೆ ಸೇವೆ.ಯುವ ಕಾಂಗ್ರೆಸ್ ಎಂದರೆ ಸಾಮಾಜಿಕ ನ್ಯಾಯ.ಯುವ ಕಾಂಗ್ರೆಸ್ ಎಂದರೆ ದೇಶದ ಭವಿಷ್ಯವನ್ನು ಕಟ್ಟುವ ಯುವ ಶಕ್ತಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು N ರಮೇಶ್ ಮಾತನಾಡಿ ನಮ್ಮ ದೇಶದ ಇತಿಹಾಸವನ್ನು ನೋಡಿದಾಗ, ಅನೇಕ ಮಹತ್ವದ ಬದಲಾವಣೆಗಳ ಹಿಂದೆ ಯುವಕರ ಶಕ್ತಿ ಇದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾಮಾನ್ಯ ಕಾರ್ಯಕರ್ತರು ಬೀದಿಗಿಳಿದು ಹೋರಾಡಿದಾಗಲೇ ಅನೇಕ ಹಕ್ಕುಗಳು ಜನರಿಗೆ ದೊರೆತಿವೆ ಎಂದು ತಿಳಿಸಿದರು.
ನಂತರ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ರವಿಕುಮಾರ್ ನಮ್ಮ ಸಂಘಟನೆಯ ಶಕ್ತಿ ದೊಡ್ಡ ನಾಯಕರಲ್ಲಿ ಮಾತ್ರ ಇಲ್ಲ.ನಮ್ಮ ಸಂಘಟನೆಯ ನಿಜವಾದ ಶಕ್ತಿ ಸಾಮಾನ್ಯ ಕಾರ್ಯಕರ್ತರಲ್ಲಿ ಇದೆ.ಒಬ್ಬ ಸಾಮಾನ್ಯ ಕಾರ್ಯಕರ್ತನ ಪರಿಶ್ರಮದಿಂದಲೇ ಸಂಘಟನೆ ಬಲವಾಗುತ್ತದೆ.ಕಾರ್ಯಕರ್ತರ ಬೆವರಿನಿಂದಲೇ ಪಕ್ಷದ ಬಾವುಟ ಎತ್ತರಕ್ಕೆ ಹಾರುತ್ತದೆ.ಆದ್ದರಿಂದ ಇಂದು ನಾವು ಒಂದು ಸಂಕಲ್ಪ ಮಾಡೋಣ—ಯುವಕರ ಸಮಸ್ಯೆಗಳಿಗೆ ಧ್ವನಿಯಾಗೋಣ.ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡೋಣ.ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲೋಣ.ಸಂವಿಧಾನದ ಮೌಲ್ಯಗಳನ್ನು ರಕ್ಷಿಸೋಣ.ದ್ವೇಷದ ರಾಜಕಾರಣಕ್ಕೆ ಬದಲಾಗಿ ಸಹೋದರತ್ವದ ರಾಜಕಾರಣವನ್ನು ಬೆಳೆಸೋಣ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಅಪ್ಕಾಮ್ ಅಧ್ಯಕ್ಷರಾದ ವಿಜಯಕುಮಾರ್, ಯುವ ಮುಖಂಡರಾದ ಮಧುಸೂದನ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್, ನಗರ ಅಧ್ಯಕ್ಷ ಚರಣ್, ಬ್ಲಾಕ್ ಅಧ್ಯಕ್ಷ ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲಗೊಪ್ಪ ಶಿವು, ಅಬ್ದುಲ್, ಧನರಾಜ್ ಹಾಗೂ ಸಾಕಷ್ಟು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
