Shivamogga Police ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಫುಟ್ಪಾತ್ನ ಜೊತೆಗೆ ಇದೀಗ, ಓಡಿಸದೇ ಯಾವುದೋ ಕಾರಣಕ್ಕೆ ರೋಡ್ ಸೈಡ್ ನಿಲ್ಲಿಸಿದ್ದ ವಾಹನಗಳಿಗೆ ಕೊನೆ ನಿಲ್ದಾಣ ತೋರಿಸಲು ಶಿವಮೊಗ್ಗ ಪೊಲೀಸರು ಈಗಾಗಲೇ ಪ್ರಯತ್ನ ಆರಂಭಿಸಿದ್ದರು. ಇದಕ್ಕಾಗಿ ಹಲವು ದೂಳು ಹಿಡಿದ ವೆಹಿಕಲ್ಗಳಿಗೆ ನೋಟಿಸ್ ಅಂಟಿಸಿದ್ರು. ಈ ನಿಟ್ಟಿನಲ್ಲಿ, ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ಒಟ್ಟು 84 ವಾಹನಗಳನ್ನು ಪತ್ತೆಹಚ್ಚಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದರು. ಸದ್ಯ ಈ ಪೈಕಿ ವಾಹನಗಳನ್ನು ತೆರವುಗೊಳಿಸುವಂತೆ ಸೂಚನೆಗೆ ಕೆಲ ಮಾಲೀಕರು ಉತ್ತರಿಸದ ಹಿನ್ನೆಲೆಯಲ್ಲಿ ವಾಹನಗಳನ್ನ ಸ್ಟೇಷನ್ಗೆ ತೆಗೆದುಕೊಂಡು ಹೋಗುತ್ತಿದ್ದರು.
ಒಟ್ಟು 84 ವಾಹನಗಳಿಗೆ ಸಿಟಿಯಲ್ಲಿ ನೋಟಿಸ್ ಅಂಟಿಸಲಾಗಿತ್ತು,. ಈ ಪೈಕಿ 68 ವಾಹನಗಳ ಮಾಲೀಕರು ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ವಾಹನಗಳನ್ನು ರೋಡ್ ಸೈಡ್ನಿಂದ ತೆರವುಗೊಳಿಸಿದ್ದಾರೆ. ಆದರೆ 16 ವಾಹನಗಳ ಮಾಲೀಕರು ಉತ್ತರಕ್ಕೆ ಸಿಕ್ಕಿರಲಿಲ್ಲ
ಅದಕಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ರವರ ಸಾರಥ್ಯದಲ್ಲಿ, ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಈ 16 ವಾಹನಗಳನ್ನು ಪರಿತ್ಯಕ್ತ ಹಾಗೂ ಅನುಪಯುಕ್ತ ವಾಹನಗಳೆಂದು ಅಧಿಕೃತವಾಗಿ ಪರಿಗಣಿಸಿ ರಿಮೂವ್ ಮಾಡಲಾಗುತ್ತಿದೆ.
ಟೋಯಿಂಗ್ ವೆಹಿಕಲ್ ಮೂಲಕ ಇದುವರೆಗೂ ಆರು ವೆಹಿಕಲ್ಗಳನ್ನ ರೋಡ್ಸೈಡ್ ನಿಂದ ರಿಮೂವ್ ಮಾಡಿ ಸ್ಟೇಷನ್ಗೆ ತಂದು ಹಾಕಲಾಗಿದೆ. ಈ ಬಗ್ಗೆ ಸ್ವತಃ ಪೊಲೀಸ್ ಇಲಾಖೆ ಮಲೆನಾಡುಟುಡೆಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ವಿವರ ಹಂಚಿಕೊಂಡಿದೆ. ಅಲ್ಲದೆ, ಈ ಬಗ್ಗೆ ಎಸ್ಪಿ ನಿಖಿಲ್ ಬಿ ವಿನಂತಿಯೊಂದನ್ನ ಮಾಡಿದ್ದಾರೆ.
ಸಾರ್ವಜನಿಕರು ರಸ್ತೆ, ಪಾದಚಾರಿ ಮಾರ್ಗ ಹಾಗೂ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡಬಾರದು ಹಾಗೂ ಎಲ್ಲರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಮುಂದಿನ ದಿನಗಳಲ್ಲಿಯೂ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಯಾವುದೇ ವಾಹನಗಳ ವಿರುದ್ಧವೂ ಇದೇ ರೀತಿಯ ಕಠಿಣ ಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗುವುದು
ನಿಖಿಲ್. ಬಿ. ಎಸ್ಪಿ, ಶಿವಮೊಗ್ಗ
