ಆಗಸ್ಟ್ 13, ರಂಭಾಪುರಿ ಜಗದ್ಗುರುಗಳಿಂದ ಶ್ರಾವಣ ತಪೋನುಷ್ಠಾನ, ಆಗಸ್ಟ್ ತಿಂಗಳ ಪ್ರವಾಸದ ವಿವರ ಹೀಗಿದೆ.

Published: 01 ಆಗಷ್ಟ್ 2026, 8:39 ಫೂರ್ವಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Rambhapuri Jagadguru / ಮಲೆನಾಡು ಟುಡೆ ಸುದ್ದಿ / ಬಾಳೆಹೊನ್ನೂರು / ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಗಸ್ಟ್ ತಿಂಗಳ ಪ್ರವಾಸದ ವಿವರಗಳನ್ನು ಪ್ರಕಟಿಸಲಾಗಿದೆ. ಈ ಕುರಿತು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಬಾಳನಗೌಡ್ರ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಆಗಸ್ಟ್ 2 ರಂದು ಬೆಂಗಳೂರಿನ ಭಾರತ ಧರ್ಮ ನಗರದಲ್ಲಿ ಇಷ್ಟಲಿಂಗ ಮಹಾಪೂಜೆ…

Rambhapuri Jagadguru / ಮಲೆನಾಡು ಟುಡೆ ಸುದ್ದಿ / ಬಾಳೆಹೊನ್ನೂರು / ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಗಸ್ಟ್ ತಿಂಗಳ ಪ್ರವಾಸದ ವಿವರಗಳನ್ನು ಪ್ರಕಟಿಸಲಾಗಿದೆ. ಈ ಕುರಿತು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಬಾಳನಗೌಡ್ರ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ಆಗಸ್ಟ್ 2 ರಂದು ಬೆಂಗಳೂರಿನ ಭಾರತ ಧರ್ಮ ನಗರದಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಸಮಾರಂಭ ಜರುಗಲಿದೆ. ಆಗಸ್ಟ್ 3 ರಿಂದ 5 ರವರೆಗೆ ಹರಿಹರದಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭ ಏರ್ಪಡಿಸಲಾಗಿದೆ. ಆಗಸ್ಟ್ 6 ರಿಂದ 10 ರವರೆಗೆ ದಾವಣಗೆರೆಯಲ್ಲಿ ಇಷ್ಟಲಿಂಗ ಮಹಾಪೂಜಾ ಮತ್ತು ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ. ಅದೇ ರೀತಿ ಆಗಸ್ಟ್ 11 ರಂದು ಹರಿಹರ ತಾಲ್ಲೂಕಿನ ಹನಗವಾಡಿಯಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭವನ್ನು ಜಗದ್ಗುರುಗಳು ನಡೆಸಲಿದ್ದಾರೆ.

  1. ಆಗಸ್ಟ್ 12 ರಂದು ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಶಿಲಾಮಠದಲ್ಲಿ ನಡೆಯಲಿರುವ ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯವನ್ನು ಜಗದ್ಗುರುಗಳು ವಹಿಸಲಿದ್ದಾರೆ.
  2. ಆಗಸ್ಟ್ 13 ರಂದು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ತಮ್ಮ 35 ನೇ ವರ್ಷದ ಶ್ರಾವಣ ತಪೋನುಷ್ಠಾನವನ್ನು ಆರಂಭಿಸಲಿದ್ದಾರೆ. ಆಗಸ್ಟ್ 15 ರಂದು ಬೆಳಿಗ್ಗೆ ಶ್ರೀ ಪೀಠದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ.
  3. ಆಗಸ್ಟ್ 16 ರಂದು ಶ್ರೀ ಪೀಠದಲ್ಲಿ ಶ್ರೀಮದ್ ರಂಭಾಪುರಿ ಶಿವಾನಂದ ಜಗದ್ಗುರುಗಳ ಲಿಂಗಾಂಗ ಸಾಮರಸ್ಯದ ಪುಣ್ಯ ಸ್ಮರಣೆ ಜರುಗಲಿದೆ.
  4. ಆಗಸ್ಟ್ 20 ರಂದು ಶ್ರೀಮದ್ ರಂಭಾಪುರಿ ವೀರರುದ್ರ ಮುನಿ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಸಮಾರಂಭ ನಡೆಯಲಿದ್ದು, ಸೆಪ್ಟೆಂಬರ್ 11 ರಂದು ಶ್ರಾವಣ ತಪೋನುಷ್ಠಾನ ಮಂಗಲ ಸಮಾರಂಭದ ಸಾನ್ನಿಧ್ಯವನ್ನು ಶ್ರೀಗಳು ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

END OF STORY

ajjimane ganesh

Senior Journalist | Malenadu Today
✓ Verified Journalist