Super Talented Kid Award / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಕ್ಕಳ ಪ್ರತಿಭೆಗೆ ಸಾಕ್ಷಿಯಾಗುವ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನ ‘ಸೂಪರ್ ಟ್ಯಾಲೆಂಟೆಡ್ ಕಿಡ್ ಪ್ರಶಸ್ತಿಯನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಎನ್ ಶ್ರೀಹಿತಾ ಪಡೆದುಕೊಂಡಿದ್ದಾಳೆ.
ಈಕೆ ತಾಲೂಕಿನ ಚಿಕ್ಕಾವಲಿ ಗ್ರಾಮದ ಆರ್.ನವೀನ್ ಕುಮಾರ್ ಹಾಗೂ ರಂಜಿತಾ ದಂಪತಿ ಪುತ್ರಿ. 1.7 ವರ್ಷದ ಎನ್.ಶ್ರೀಹಿತಾ, ತನ್ನ ಅಸಾಧಾರಣ ನೆನಪು ಶಕ್ತಿ, ಗ್ರಹಿಕೆ ಸಾಮರ್ಥ್ಯ ಹಾಗೂ ಬೌದ್ಧಿಕ ಪ್ರತಿಭೆ ಯನ್ನು ಇತ್ತೀಚೆಗೆ ಪ್ರದರ್ಶಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ವತಿಯಿಂದ ‘ಸೂಪರ್ ಟ್ಯಾಲೆಂಟೆಡ್ ಕಿಡ್ ಪ್ರಶಸ್ತಿ’ ಹಾಗೂ ‘ಒನ್ ಇನ್ ಎ ಮಿಲಿಯನ್’ ವಿಶೇಷ ಗೌರವಕ್ಕೆ ಭಾಜನರಾಗಿದ್ದಾರೆ.
ಶ್ರೀಹಿತಾ ಪ್ರಾಣಿಗಳು, ಹಣ್ಣುಗಳು, ತರಕಾರಿಗಳು ಹಾಗೂ ಮಾನವ ಅಂಗಗಳನ್ನು ಗುರುತಿಸುವುದು, ದೇಶದ ಪ್ರಧಾನಿ, ರಾಷ್ಟ್ರಪತಿ ಹೆಸರನ್ನು ಗುರುತಿಸಿ ಹೇಳುವುದು, ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸುವುದು, ವರ್ಷದ 12 ತಿಂಗಳು ಗಳನ್ನು ಪಠಿಸುವುದು, ದೇಶ, ರಾಜ್ಯ ಹಾಗೂ ಜಿಲ್ಲೆಯ ಹೆಸರನ್ನು ಗುರುತಿಸುವುದು ಸೇರಿದಂತೆ ತಮ್ಮ ವಯಸ್ಸಿಗೆ ಮೀರಿದ ಪ್ರತಿಭೆ ಪ್ರದರ್ಶಿಸಿದ್ದಾರೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
