Vana Durga Parameshwari / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿಯ ಪ್ರಸಿದ್ದ ದೇವಸ್ಥಾನದಲ್ಲಿ ಕಳ್ತನವಾಗಿದೆ. ಅರಳಸುರುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲಿಸರ ಪ್ರದೇಶದಲ್ಲಿರುವ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಘಟನೆ ಇವತ್ತು ವರದಿಯಾಗಿದೆ. ಮಲೆನಾಡು ಟುಡೆ ಸ್ಥಳೀಯ ಮಿತ್ರರೊಬ್ಬರು ಈ ಬಗ್ಗೆ ವರದಿ ಮಾಡಿದ್ದಾರೆ.
ದೇವಸ್ಥಾನದ ಗರ್ಭಗುಡಿಯ ಬೀಗವನ್ನು ಒಡೆದಿರುವ ದುಷ್ಕರ್ಮಿಗಳು ಚಿನ್ನಾಭರಣಗಳನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ವನ ದುರ್ಗಾಪರಮೇಶ್ವರಿ ದೇವಿಯ ಬೆಳ್ಳಿಯ ಮುಖವಾಡ ಹಾಗೂ ಮಾಂಗಲ್ಯ ಸರ ಕಳುವಾಗಿದೆ. ಬೆಳ್ಳಿಯ ಸಾಮಾನು ಸೇರಿದಂತೆ ಎರಡು ಕಿಲೋಗ್ರಾಂಗಳಿಗೂ ಅಧಿಕ ತೂಕದ ಪೂಜಾ ಪರಿಕರ ಕಳುವಾಗಿದೆ. ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯಲ್ಲಿದ್ದ ಕಾಣಿಕೆ ಸಹ ಕಾಣುತ್ತಿಲ್ಲ ಎಂದು ಸ್ತಳೀಯರು ಹೇಳಿದ್ದಾರೆ.
ವಾರಕ್ಕೆ ಎರಡು ದಿನ ಮಾತ್ರ ವಿಶೇಷ ಪೂಜೆ ನಡೆಯುವ ಈ ದೇವಾಲಯದ ಆವರಣದಲ್ಲಿ ಉಳಿದ ದಿನ ಭಕ್ತರ ಓಡಾಟ ಕಡಿಮೆ ಇರುತ್ತದೆ. ಇದನ್ನ ಕಳ್ಳರು ವಾಚ್ ಮಾಡಿರಬಹುದು ಎಂದು ಅನುಮಾನಿಸಲಾಗಿದೆ. ಇವತ್ತು ಬೆಳಗ್ಗೆ ಕಳ್ತನವಾಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಅಪರಾಧ ಪತ್ತೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಸುಷ್ಮಾ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಮಹಜರ್ ಮುಗಿಸಿದ್ದಾರೆ. ಸದ್ಯ ಕಳ್ಳರ ಬಂಧನವಷ್ಟೆ ಬಾಕಿ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
