Bicycle Stolen from House / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೆಲವೊಮ್ಮೆ ಏನೂ ಆಗಲ್ಲ ಬಿಡು, ಇಲ್ಯಾರು ಬರಲ್ಲ ಬಿಡು, ನಮ್ಮನೆಯಲ್ಲಿ ಹಾಗೆಲ್ಲಾ ಬಿಡು ಅಂತಿರುತ್ತೇವೆ, ಹಾಗೆ ಅಂದುಕೊಂಡು ಆರಾಮಾಗಿರುತ್ತೇವೆ. ಅಂಥಹ ಸಂದರ್ಭದಲ್ಲಿಯೇ ಏನೋ ಒಂದು ನಡೆದು ಹೋಗುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಶಿವಮೊಗ್ಗದ ಮಲ್ಲೇಶ್ವರ ನಗರ (ಗುಂಡಪ್ಪ ಶೆಡ್) . ಇಲ್ಲಿನ ಏರಿಯಾದ ಮೊದಲನೇ ತಿರುವಿನಲ್ಲಿರುವ ಮನೆಯೊಂದರ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಮೂವತ್ತು ಸಾವಿರ ರೂಪಾಯಿ ಬೆಲೆಬಾಳುವ ಸೈಕಲ್ ಒಂದನ್ನು ಕಳ್ಳನೊಬ್ಬ ಆರಾಮಾಗಿ ಕದ್ದೊಯ್ದಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಒಂದರಲ್ಲಿ ಸೆರೆಯಾಗಿದೆ.
ಕಳೆದ ಭಾನುವಾರ ಕೃತ್ಯ ನಡೆದಿದ್ದು, ಇದೀಗ ಸಿಸಿ ಟಟಿ ದೃಶ್ಯದೊಂದಿಗೆ ಮಾಹಿತಿ ಹೊರಬಿದ್ದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಯು ಕಾಂಪೌಂಡ್ ಒಳಗೆ ಪ್ರವೇಶಿಸಿ ಸೈಕಲ್ ಏರಿ ಪರಾರಿಯಾಗುತ್ತಿರುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮನೆಯ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳತನದ ದೃಶ್ಯ ಕಾಣಸಿಕ್ಕಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣುವಂತೆ ಆರೋಪಿಯು ಮೊದಲು ಮನೆಯ ಸುತ್ತಮುತ್ತ ಸಂಚರಿಸಿ ಪರಿಸರ ಗಮನಿಸಿದ್ದಾನೆ. ಆಕಡೆ ಈಕಡೆ ಓಡಾಡಿ ಯಾರು ಗಮನಿಸುತ್ತಿಲ್ಲ ಎಂಬುದನ್ನ ಖಾತರಿ ಪಡಿಸಿಕೊಂಡಿದ್ದಾನೆ. ನಂತರ ಕಾಂಪೌಂಡ್ ಒಳಗೆ ನುಗ್ಗಿ ಅಲ್ಲೇ ನಿಲ್ಲಿಸಿದ್ದ ಕೆಂಪು ಬಣ್ಣದ ದುಬಾರಿ ಸೈಕಲ್ ಅನ್ನು ಹತ್ತಿ ಸವಾರಿ ಮಾಡಿಕೊಂಡು ಪರಾರಿಯಾಗಿದ್ದಾನೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
