Honest Man ಶಿವಮೊಗ್ಗ: ಮನುಷ್ಯನಲ್ಲಿ ಮನುಷ್ಯತ್ವ ಮತ್ತು ಪ್ರಾಮಾಣಿಕತೆ ಎನ್ನುವುದು ದಿನದಿಂದ ದಿನಕ್ಕೆ ಮರೆಯಾಗುತ್ತಿರುವ ಈ ಕಾಲದಲ್ಲಿ, ಕೆಲವು ವ್ಯಕ್ತಿಗಳಿಂದ ಪ್ರಾಮಾಣಿಕತೆಗೆ ನಿಜವಾದ ಅರ್ಥ ಸಿಗುತ್ತಿದೆ. ಅದಕ್ಕೆ ಹೊಳೆಹೊನ್ನೂರು ಗ್ರಾಮದ ರಾಮಪ್ಪ ಉತ್ತಮ ನಿದರ್ಶನವಾಗಿದ್ದಾರೆ.
ಶಿವಮೊಗ್ಗ ಕುಡಿಯುವ ನೀರು ವ್ಯತ್ಯಯ: ನ್ಯೂ ಮಂಡ್ಲಿ ಪಂಪ್ ಹೌಸ್ಗೆ ಶಾಸಕ ಚನ್ನಬಸಪ್ಪ ದಿಢೀರ್ ಭೇಟಿ,
ವಿಷಯ ಏನೆಂದರೆ, ಇದೇ ಎರಡು ದಿನಗಳ ಹಿಂದೆ ಅಂದರೆ ಜುಲೈ 9 ರಂದು ಮಹಿಳೆಯೊಬ್ಬರು ತಮ್ಮ 14 ಗ್ರಾಂ ತೂಕದ ತಾಳಿ ಸರವನ್ನು ಕಳೆದುಕೊಂಡಿದ್ದರು. “ಅಯ್ಯೋ ಸರ ಕಳೆದುಹೋಯಿತಲ್ಲ, ಇನ್ನು ಆ ಸರ ಸಿಗುವುದು ಅನುಮಾನವೇ” ಎಂದು ಅವರು ಗಾಬರಿಯಾಗಿದ್ದರು. ಆದರೆ ಆ ಸರ ಹೊಳೆಹೊನ್ನೂರು ಗ್ರಾಮದ ಪ್ರಾಮಾಣಿಕ ವ್ಯಕ್ತಿಯಾದ ರಾಮಪ್ಪ ಅವರ ಕೈಗೆ ಸಿಕ್ಕಿತ್ತು. ಬೇರೆ ಯಾರಾದರೂ ಆಗಿದ್ದರೆ ಒಳ್ಳೆಯ ಬೆಲೆ ಇದೆ, ಸಿಕ್ಕಿದ್ದೇ ಚಾನ್ಸ್ ಎಂದು ಮಾರಾಟ ಮಾಡುತ್ತಿದ್ದರೇನೋ, ಆದರೆ ರಾಮಪ್ಪ ಹಾಗೆ ಮಾಡಲಿಲ್ಲ. ಸರ ಸಿಕ್ಕ ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಪೊಲೀಸರು ಸರವನ್ನು ಪಡೆದುಕೊಂಡು ಬಂದು, ಅದರ ಮಾಲೀಕರಾದ ಮಂಜಮ್ಮ ಅವರಿಗೆ ಹಿಂದಿರುಗಿಸಿದ್ದಾರೆ. ಕಷ್ಟಪಟ್ಟು ಸಂಪಾದಿಸಿದ್ದು ಎಂದಿದ್ದರೂ ಕೈಸೇರುತ್ತದೆ ಎಂಬ ಮಾತಿನಂತೆ ಮಂಜಮ್ಮ ಅವರಿಗೆ ತಮ್ಮ ಸರ ಮರಳಿ ಸಿಕ್ಕಿದೆ. ಹಾಗೆಯೇ ರಾಮಪ್ಪ ಅವರ ಈ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
