ಇನ್​ಸ್ಟಾದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಶಿವಮೊಗ್ಗ ಯುವಕರಿಗೆ ಶಾಕ್​ ಕೊಟ್ಟ ಪೊಲೀಸ್! ವೈರಲ್ ಮ್ಯಾಟರ್​ ಇದು!

ಹಂಚಿಕೊಳ್ಳಿ
WhatsApp Facebook X Telegram
shivamogga-youth-arrested-for-mocking-police-viral-video
shivamogga-youth-arrested-for-mocking-police-viral-video

shivamogga youth / ಮಲೆನಾಡು ಟುಡೆ / ಶಿವಮೊಗ್ಗ / ಸಾಮಾನ್ಯವಾಗಿ ಶಿವಮೊಗ್ಗ ಪೊಲೀಸರು ರೀಲ್ಸ್ ಮಾಡುತ್ತಾರೆ. ಅದರಲ್ಲಿಯು ವೈಟ್ ಎ ಮಿನಿಟ್ ಅಂತಾ ಸೇರಿಸಿ ಶಿವಮೊಗ್ಗ ಟ್ರಾಫಿಕ್​ ಪೊಲೀಸರು , ಸಂಚಾರಿ ದಂಡ ವಿಧಿಸಿದ ಅಥವಾ ವೀಲ್ಹೀಂಗ್ ಮಾಡಿದವರನ್ನು ಹಿಡಿಯುವ ವಿಡಿಯೋ ಮಾಡುತ್ತಾರೆ. ಆದರೆ ಇದೀಗ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಇಗೋ ಹರ್ಟ್​ ಮಾಡಿದವರ ವಿಡಿಯೊವೊಂದರ ವಿರುದ್ಧ ಶಿವಮೊಗ್ಗ ಸಂಚಾರಿ ಪೊಲೀಸ್ ವಿಭಾಗದಿಂದಲೇ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರ ರೀಲ್ಸ್​ ಹಿಟ್​ ಆಗುತ್ತಿದೆ.

ಏನಿದು ಪ್ರಕರಣ

ಹೌದು ಶಿವಮೊಗ್ಗ ಸಂಚಾರಿ ಪೊಲೀಸರು, ಹೆಲೈಟ್ ಧರಿಸದೆ ಬೈಕ್​ ಓಡಿಸುತ್ತಾ, ಪೊಲೀಸ್ ಸಿಬ್ಬಂದಿ ಹಾಗೂ ಪಕ್ಕದಲ್ಲಿ ಸಂಚರಿಸುತ್ತಿದ್ದ ಮಹಿಳಾ ಮೊಪೆಡ್ ಸವಾರರನ್ನು ಅಪಹಾಸ್ಯ ಮಾಡಿ ರೀಲ್ಸ್ ಮಾಡಿ, ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಯುವಕರನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.

ಟಿ.ಸೀನಪ್ಪಶೆಟ್ಟಿ ವೃತ್ತದಲ್ಲಿ ಸೋಮವಾರ ಬೈಕ್​ ಸವಾರ ತನ್ನ ಜೊತೆಗೆ ಹಿಂಬದಿ ಸವಾರನ ಜೊತೆಗೆ ಸೇರಿಕೊಂಡು ರೀಲ್ಸ್​ ಮಾಡಿದ್ದಾನೆ. ಅಲ್ಲದೆ ಅಲ್ಲೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಅಪಹಾಸ್ಯ ಮಾಡಿದ್ದ, ಜತೆಗೆ ಮಹಿಳಾ ದ್ವಿಚಕ್ರ ವಾಹನ ಸವಾರರನ್ನು ಅಪಹಾಸ್ಯ ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಾಹನ ಸವಾರ ಹಾಗೂ ಹಿಂಬದಿ ಸವಾರನನ್ನು ವಶಕ್ಕೆ ಪಡೆದು, ಮೊಪೆಡ್ ಅನ್ನು ಸೀಜ್ ಮಾಡಿದ್ದಾರೆ. ಅಲ್ಲದೆ ಅವರ ಮೂಲಕ ಸಾರಿ ಕೇಳುವ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ವಾಹನ ಸವಾರನ ವಿರುದ್ದ ಭಾರತೀಯ ಮೋಟಾರು ವಾಹನಗಳ ಕಾಯಿದೆ ಅಡಿ ಕ್ರಮ ಕೈಗೊಳ್ಳಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor