Shooting Video in Jog Falls / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜೋಗ ಜಲಪಾತದ ನಿಷೇಧಿತ ಪ್ರದೇಶಕ್ಕೆ ತೆರಳಿ ಅಪಾಯಕಾರಿ ವಿಡಿಯೋ ಚಿತ್ರೀಕರಣದ ವಿಚಾರವಾಗಿ ತೀರ್ಥಹಳ್ಳಿಯ ಮೂವರು ಯುವಕರ ವಿರುದ್ಧ ನೆರೆಜಿಲ್ಲೆ ಉತ್ತರಕನ್ನಡದ ಸಿದ್ದಾಪುರ ಪೊಲೀಸ್ ಸ್ಟೇಷನ್ನಲ್ಲಿ ಎಫ್‌ಐಆರ್ ದಾಖಲಾಗಿದೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ವ್ಯಾಪ್ತಿಗೆ ಜೋಗ ಜಲಪಾತದ ರಾಜಾ ಫಾಲ್ಸ್‌ನ ಸೇರುತ್ತದೆ. ಈ ಪ್ರದೇಸ ತುಂಬಾನೆ ಅಪಾಯಕಾರಿ. ಹಾಗಾಗಿ ಅಲ್ಲಿಗೆ ತೆರಳಲು ಯಾರಿಗೂ ಅವಕಾಶವಿಲ್ಲ. ಆದಾಗ್ಯು ನಿಬಂದನೆಗಳನ್ನು ಮೀರಿ ಸ್ಥಳಕ್ಕೆ ತೆರಳಿದ್ದಷ್ಟೆ ಅಲ್ಲದೆ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಅಡಿಯಲ್ಲಿ ಮೂವರು ಯುವಕರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಿವಾಸಿಗಳಾದ ಮೂವರ ವಿರುದ್ಧ ಈ ಕೇಸ್ ದಾಖಲಾಗಿದೆ. ಜೂನ್ 29, 2026 ರಂದು ಪ್ರಕರಣ ಸಂಬಂಧ ಮಧ್ಯಾಹ್ನ 14:30 ಗಂಟೆಗೆ ಸಿದ್ದಾಪುರ ಪೊಲೀಸ್ ಠಾಣೆಯ ಎಸ್ಐ ಶಾಂತಿನಾಥ ಕೆ. ಪಾಸಾನೆ ಅವರು ಸ್ವಯಂ ಪ್ರೇರಿತ ಸಮುಟೋ ಕೇಸ್ ದಾಖಲಸಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ಕಾಯ್ದೆ 125, ಜೊತೆಗೆ 3(5) ರ ಅಡಿಯಲ್ಲಿ ಎಫ್‌ಐಆರ್ ಆಗಿದೆ.
ನಡೆದಿದ್ದೇನು?
‘ಮಿಸ್ಟರ್ ಕನ್ನಡಿಗ’ (mister_kannadiga) ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಎರಡು ವಿಡಿಯೋಗಳು ಪೋಸ್ಟ್ ಆಗಿತ್ತು. ಜೋಗ ಜಲಪಾತದ ನೀರು ಕೆಳಗೆ ಬೀಳುವ ಜಾಗ ಎಂಬ ಟೈಟಲ್ ಇದ್ದ ಈ ವಿಡಿಯೋದಲ್ಲಿ ಜೋಗ ಫಾಲ್ಸ್ ಎಷ್ಟು ಎತ್ತರದಿಂದ ನೀರು ಬೀಳುತ್ತದೆ, ಕೆಳಗಡೆ ಫುಲ್ ಪ್ರಪಾತ ಗಾಯ್ಸ್, ಫುಲ್ ಹೆದರಿಕೆ, ನೆಕ್ಸ್ಟ್ ಲೆವೆಲ್ ವ್ಯೂ ಗಾಯ್ಸ್” ಎಂದು ಹೇಳುತ್ತಾ ರಾಜಾ ಫಾಲ್ಸ್ ಸೇರಿದಂತೆ ಅಲ್ಲಿನ ಅಪಾಯಕಾರಿ ಸ್ಥಳದಲ್ಲಿ ಓಡಾಡಿ ಚಿತ್ರೀಕರಣ (Shooting Video in Jog Falls) ಮಾಡಿದ್ದಾರೆ. ಬಳಿಕ ಅದನ್ನು ಅಪ್ಲೋಡ್ ಮಾಡಿದ್ದರು
ಈ ವಿಡಿಯೋ ಬಗ್ಗೆ ಸ್ಟೇಷನ್ನಲ್ಲಿ ಸೋಶಿಯಲ್ ಮೀಡಿಯಾದ ಫೋಸ್ಟ್ಗಳ ಮೇಲೆ ನಿಗಾಗ ಇಡುವ ಸಿಬ್ಬಂದಿ ಎಸ್ಐ ಗಮನಕ್ಕೆ ತಂದಿದ್ದರು, ಪ್ರವಾಸಿಗರಿಗೆ ನಿರ್ಬಂಧವಿರುವ ಹಾಗೂ ಧುಮುಕಿ ಹರಿಯುವ ರಾಜಾ ಜಲಪಾತದ ಕಲ್ಲಿನ ಬಂಡೆಯ ತುದಿಗೆ ಮೂವರು ವ್ಯಕ್ತಿಗಳು ತೆರಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ ಮಾವಿನಗುಂಡಿ ಸಮೀಪದ ಬ್ರಿಟಿಷ್ ಬಂಗಲೆ ಬಳಿ ಇರುವ ಅಪಾಯಕಾರಿ ಸ್ಥಳಕ್ಕೆ ತೆರಳುವುದು ಹಾಗೂ ಜಲಪಾತದ ತುದಿಗೆ ತೆರಳುವುದು ಮಾನವ ಜೀವಕ್ಕೆ ಹಾಗೂ ವೈಯಕ್ತಿಕ ಸುರಕ್ಷತೆಗೆ ತೀವ್ರ ಹಾನಿ ತರುವ ಅಪಾಯಕಾರಿ ಕೃತ್ಯ . ಈ ಸ್ಥಳಗಳಿಗೆ ಹೋಗದಂತೆ ಸೂಚನಾ ಫಲಕ ಹಾಗೂ ಎಚ್ಚರಿಕೆ ಫಲಕ ಅಳವಡಿಸಲಾಗಿದೆ.
ಇದನ್ನೂ ಉಲ್ಲಂಘಿಸಿ ಆರೋಪಿಗಳು ಕಲ್ಲಿನ ಬಂಡೆಯ ಮೇಲೆ ಹೋಗಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸುವ ಇತರೆ ಪ್ರವಾಸಿಗರು ಕೂಡ ಪ್ರೇರೇಪಿತರಾಗಿ ಇಂತಹ ಅಪಾಯಕಾರಿ ಜಾಗಕ್ಕೆ ಬರುವ ಸಾಧ್ಯತೆಗಳಿರುತ್ತವೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿರುವ ಎಸ್ಐ, ಈ ಸಂಬಂಧ ಸುಮುಟೋ ಕೇಸ್ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಓದುಗರೆ, ವಿಡಿಯೋ ಮಾಡುವುದು ಒಳ್ಳೆಯದೆ, ಹಾಗಂತ ವೀವ್ಸ್ಗಾಗಿ ತೀರಾ ಅಪಾಯಕಾರಿ ಸ್ಥಳಕ್ಕೆ ತೆರಳಿ ಶೂಟ್ ಮಾಡುವುದು ಕಾನೂನು ಬಾಹಿರ. ಮೇಲಾಗಿ ಶಿವಮೊಗ್ಗದಲ್ಲಿ ನಿರ್ಬಂಧಿತಗೊಂಡಿರುವ ಲೆಕ್ಕಕ್ಕೂ ಮಿಗಿಲಾದ ತಾಣಗಳಿವೆ. ಆ ಜಾಗವೆಲ್ಲಾ ಸ್ವರ್ಗದ ಅನುಭವ ನೀಡುತ್ತದೆಯಾದರೂ ಅಲ್ಲಿಗೆ ಹೋಗುವುದು ನರಕಕ್ಕೂ ದಾರಿಯಾಗುವುದು ಎಂಬ ಕಾರಣಕ್ಕೆ ಹಲವೆಡೆ ನಿರ್ಬಂಧ ಹೇರಿ ಪೊಲೀಸ್ ಅರಣ್ಯ ಸಿಬ್ಬಂದಿ ಕಾವಲು ನಿಂತಿರುತ್ತಾರೆ. ಹಾಗಿದ್ದರೂ ರೂಲ್ಸ್ ಬ್ರೇಕ್ ಮಾಡಿ ಹೋಗುವುದು ಏನಕ್ಕೂ ಸಹ ದಾರಿ ಮಾಡಿಕೊಡಬಲ್ಲದು. ಕೆಲವು ವರ್ಷಗಳ ಹಿಂದೆ ಇದೇ ಜೋಗದಲ್ಲಿ ಪ್ರವಾಸಿಗರ ಗುಂಪೊಂದು ಸಾಹಸ ಮಾಡಲು ಹೋಗಿ ಕೆಳಕ್ಕೆ ಬಿದ್ದಿದ್ದರು. ಆ ಘಟನೆಯ ನಂತರ ಇಡೀ ಜಿಲ್ಲಾಡಳಿತ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ವಾರಗಟ್ಟಲೇ ಹುಡುಕಾಟ ನಡೆಸಿತ್ತು. ಆದರೂ ಪರಿಶ್ರಮ ವ್ಯರ್ಥವಾಗಿತ್ತು.
ಅಂತಹ ಘಟನೆಗಳಿಗೆ ಮತ್ತೆ ಮತ್ತೆ ತಾವಾಗಿಯೇ ಅವಕಾಶವನ್ನು ಕೊಡಲು ಹೋಗಬಾರದು. ಇದೀಗ ವಿಡಿಯೋ ಮಾಡಿ ಬಂದವರನ್ನು ನೋಡಿ ಇನ್ನಷ್ಟು ಮಂದಿ ಆ ಸ್ಥಳಕ್ಕೆ ಹೋದರೆ, ಅಲ್ಲಿನ ಪೊಲೀಸರಿಗೂ ಸ್ತಳೀಯರಿಗೂ ತೊಂದರೆಯಾಗುತ್ತದೆ. ಹೀಗಾಗಿ ರೀಲ್ಸ್ ಪೋಸ್ಟ್ಗಳ ಕ್ರೇಜ್ನಲ್ಲಿ ಅಪಾಯಕಾರಿ ಸ್ಥಳಗಳಿಗೆ ಹೋಗದಿರಿ ಎಂಬುದಷ್ಟೆ ಕೋರಿಕೆ





