500 ರೂಪಾಯಿ ಸಾಲದ ವಿಚಾರ : ಚಾಕುವಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ತುಂಗಾ ನಗರ ಪೊಲೀಸ್ ಸ್ಟೇಷನ್​, ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಕೇವಲ 500 ರೂಪಾಯಿ ಸಾಲದ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಸಾಲದ ಹಣವನ್ನು  ಹಿಂತಿರುಗಿಸಿದ್ದರೂ ಸಹ, ಸಾಲ ನೀಡಿದ್ದ ವ್ಯಕ್ತಿ  ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಗರದಲ್ಲಿ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ : ಆನ್‌ಲೈನ್ ಟ್ರೇಡಿಂಗ್ ಆಮಿಷಕ್ಕೆ ಒಳಗಾಗಿ 39 ಲಕ್ಷ ಕಳೆದುಕೊಂಡ ಉದ್ಯಮಿ

Shivamogga Crime ಘಟನೆ ವಿವರ

ನಗರದ ನಿವಾಸಿ ದೂರುದಾರ ವ್ಯಕ್ತಿಯೊಬ್ಬರು ಇನ್ನೊಬ್ಬ ಪರಿಚಿತ ವ್ಯಕ್ತಿಯಿಂದ ತುರ್ತು ಅವಶ್ಯಕತೆಗಾಗಿ 500 ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಸಾಲ ಪಡೆದ ಕೇವಲ ಮೂರೇ ದಿನಗಳಲ್ಲಿ ಆ ಹಣವನ್ನು ಪರಿಚಿತ ವ್ಯಕ್ತಿಗೆ ವಾಪಸ್ ನೀಡಿದ್ದರು. ಆದಾಗ್ಯೂ, ಹಣದ ವಿಚಾರವಾಗಿ ಸಾಲ ಕೊಟ್ಟವ ದೂರುದಾರನ  ಮೇಲೆ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ.

ಇದರ ನಡುವೆ ದೂರುದಾರ ಸರ್ಕಲ್ ​​ಒಂದರ ಬಳಿ ನಿಂತಿದ್ದಾಗ . ಈ ವೇಳೆ ಅಲ್ಲಿಗೆ ಬಂದ ಆರೋಪಿ ದುರುದಾರನನ್ನು ಜನನಿಬಿಡವಲ್ಲದ ಜಾಗಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಗೆ ಹೋಗುತ್ತಿದ್ದಂತೆ ದೂರುದಾರನನ್ನು ಅಡ್ಡಗಟ್ಟಿದ ಆರೋಪಿ, ಅಶ್ಲೀಲ ಪದಗಳಿಂದ ನಿಂದಿಸಲು ಆರಂಭಿಸಿದ್ದಾನೆ. ಮಾತು ಬೆಳೆಯುತ್ತಿದ್ದಂತೆ  ಆರೋಪಿ ತನ್ನ ಬಳಿಯಿದ್ದ ಚಾಕುವನ್ನು ತೆಗೆದು ದೂರುದಾರನ ತಲೆಯ ಹಿಂಭಾಗಕ್ಕೆ ಬಲವಾಗಿ ಇರಿದಿದ್ದಾನೆ. 

ಚಾಕು ಇರಿತದ ರಭಸಕ್ಕೆ  ದೂರುದಾರನ ತಲೆಯಿಂದರ ಕ್ತಸ್ರಾವವಾಗಿದ್ದು, ಅಷ್ಟಕ್ಕೇ ನಿಲ್ಲಿಸದ ಆರೋಪಿ ಕೈಗಳಿಂದಲೂ ಮನಬಂದಂತೆ ಥಳಿಸಿದ್ದಾನೆ. ಅಲ್ಲದೆ, ನಿನಗೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.. ಗಲಾಟೆ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ದೂರುದಾರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಘಟನೆ ಹಿನ್ನೆಲ್ಲೆ ತುಂಗಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Shivamogga Crime Youth Assaulted with Knife

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor