ರಾಗಿಗುಡ್ಡದಲ್ಲಿ ಪೊಲೀಸರ ದಿಡೀರ್​ ದಾಳಿ: 1.5 ಲಕ್ಷ ಮೌಲ್ಯದ ಡ್ರಗ್ಸ್​​ ವಶ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ : ಶಿವಮೊಗ್ಗದ ರಾಗಿಗುಡ್ಡ ಚಾನಲ್ ಏರಿ ರಸ್ತೆಯಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಠಾಣಾ ಪೊಲೀಸರು ಮಾಲು ಸಮೇತ ಆರೋಪಿಯನ್ನಯ ಬಂಧಿಸಿದ್ದಾರೆ.

ನಾಲ್ವರಿಗೆ 20 ವರ್ಷ ಜೈಲು! ತೀರ್ಥಹಳ್ಳಿಯ ಕೋವಿ ಕಥೆ ಜೊತೆಗೆ ಶಿವಮೊಗ್ಗ 112 ಸುದ್ದಿ​! ಇವತ್ತಿನ ಶಾರ್ಟ್​ ನ್ಯೂಸ್​

Shivamogga ಘಟನೆಯ ವಿವರ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡ ಚಾನಲ್ ಏರಿ ರಸ್ತೆಯಲ್ಲಿರುವ ಖಾಲಿ ಲೇಔಟ್ ಒಂದರ ಬಳಿ ವ್ಯಕ್ತಿಯೊಬ್ಬ ಕಾನೂನುಬಾಹಿರವಾಗಿ ನಿಷೇಧಿತ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ.

 ದಾಳಿಯ ವೇಳೆ ಡ್ರಗ್ಸ್ ಮಾರಾಟ ಜಾಲದಲ್ಲಿ ತೊಡಗಿದ್ದ ಅಜರುದ್ದೀನ್ ಯಾನೆ ಅಜರ್ (26 ವರ್ಷ) ಎಂಬಾತ ಸಿಕ್ಕಿಬಿದ್ದಿದ್ದು, ಆತನನ್ನು ದಸ್ತಗಿರಿ ಮಾಡಲಾಗಿದೆ. ಬಂಧಿತ ಆರೋಪಿಯಿಂದ ಅಂದಾಜು 1,50,000/- ರೂಪಾಯಿ ಮೌಲ್ಯದ 15 ಗ್ರಾಂ ತೂಕದ ಎಂಡಿಎಂಎ (MDMA) ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ಫೋನ್ ಹಾಗೂ ಮಾದಕ ವಸ್ತುವಿನ ಮಾರಾಟದಿಂದ ಆತ ಗಳಿಸಿದ್ದ 1,600 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

Shivamogga MDMA Worth 1.5 Lakh Seized

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor