ಶಿವಮೊಗ್ಗ : ಆನ್‌ಲೈನ್ ಟ್ರೇಡಿಂಗ್ ಆಮಿಷಕ್ಕೆ ಒಳಗಾಗಿ 39 ಲಕ್ಷ ಕಳೆದುಕೊಂಡ ಉದ್ಯಮಿ

ಹಂಚಿಕೊಳ್ಳಿ
WhatsApp Facebook X Telegram
Shivamogga Cyber Fraud Shivamogga Cyber ScamThirthahalli Shivamogga Cyber Crime
Shivamogga Cyber Fraud Shivamogga Cyber ScamThirthahalli Shivamogga Cyber Crime

Online Trading Scam ಶಿವಮೊಗ್ಗ: ಷೇರು ಮಾರುಕಟ್ಟೆ ಹಾಗೂ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ, ನಗರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 39.76 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಅಡ್ಡಮತದಾನ! ಶಿವಮೊಗ್ಗದ ಇಬ್ಬರು ಶಾಸಕರಿಂದಲೇ ಕಾಂಗ್ರೆಸ್​ಗೆ ವೋಟ್ : ಆರ್​ಎಂ ಮಂಜುನಾಥ ಗೌಡ 

ಘಟನೆ ವಿವರ

2023ರ ಮಾರ್ಚ್ ತಿಂಗಳಲ್ಲಿ ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಾಗ, ದೂರುದಾರರಿಗೆ  Xness ಮತ್ತು Vegs 11 ಎಂಬ ಕಂಪನಿಗಳ ಆಕರ್ಷಕ ಟ್ರೇಡಿಂಗ್ ಜಾಹೀರಾತುಗಳು ಕಾಣಿಸಿಕೊಂಡಿದ್ದವು. ಅದರಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಲಾಗಿದ್ದು, ಅದನ್ನು ನಿಜವೆಂದು ನಂಬಿದ ದೂರುದಾರರು ಆ ಲಿಂಕ್ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ವಿವರ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಬ್‌ಮಿಟ್ ಮಾಡಿದ್ದರು. 

ನಂತರ ದೂರುದಾರರ ಹೆಸರಿನಲ್ಲಿ ನಕಲಿ ಡಿ-ಮ್ಯಾಟ್ ಖಾತೆಯನ್ನು ತೆರೆದಿದ್ದರು. ಆದರೆ, ಅದರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ತಾವೇ ಇಟ್ಟುಕೊಂಡು, ಹೂಡಿಕೆ ಮಾಡುವಾಗ ಮಾತ್ರ ನೀಡುವುದಾಗಿ ನಂಬಿಸಿದ್ದರು. ನಂತರ ಸಂತ್ರಸ್ತರನ್ನು ಟೆಲಿಗ್ರಾಮ್ ಗ್ರೂಪ್‌ವೊಂದಕ್ಕೆ ಸೇರಿಸಿ, ಹಣ ಹೂಡಿಕೆ ಮಾಡುವ ತಂತ್ರಗಳ ಬಗ್ಗೆ ಮಾಹಿತಿ ನೀಡಿ ವಂಚನೆ ಎಸಗಿದ್ದಾರೆ.

 ವಂಚಕರು ಟೆಲಿಗ್ರಾಮ್ ಮೂಲಕ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಬಳಸಿ, ದೂರುದಾರರಿಂದ ಅವರಿಂದ ಜೂನ್ 2023 ರಿಂದ ಮೇ 2026 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 39,76,171.41 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.  ದೂರುದಾರರು ತಮ್ಮ ಹಣವನ್ನು ಹಿಂಪಡೆಯಲುಯತ್ನಿಸಿದಾಗಲೆಲ್ಲಾ, ಈಗಲೇ ಹಣ ತೆಗೆದರೆ ನಷ್ಟವಾಗುತ್ತದೆ ಎಂದು ವಂಚಕರು ದಾರಿ ತಪ್ಪಿಸುತ್ತಾ ಬಂದಿದ್ದರು. 

 ಕಳೆದ ಮೇ ತಿಂಗಳಲ್ಲಿ ದೂರುದಾರರಿಗೆ  ತುರ್ತು ಹಣದ ಅವಶ್ಯಕತೆ ಇದ್ದಿದ್ದರಿಂದ ಹಣ ಹಿಂಪಡೆಯಲು ಕೇಳಿದಾಗ, ವಂಚಕರು ಅವರ ಡಿ-ಮ್ಯಾಟ್ ಖಾತೆಯನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸಿ (ಬ್ಲಾಕ್) ಕೈಕೊಟ್ಟಿದ್ದಾರೆ. ತಾವು ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬಂದ ಹಿನ್ನೆಲೆಯಲ್ಲಿ, ದೂರುದಾರರು ಶಿವಮೊಗ್ಗ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Online Trading Scam in Shivamogga

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor