ಶಿವಮೊಗ್ಗ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಂಗಿಯ ಮನೆ ಹುಡುಕಲು ಹೋಗಿ ಅಪರಿಚಿತರ ಮನೆಯ ಬಾಗಿಲು ಬಡಿದು ಆತಂಕ ಸೃಷ್ಟಿಸಿದ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಮೊಗ್ಗ: ಮಲಗಿದ್ದಲ್ಲಿಯೇ ಯುವಕನ ಭೀಕರ ಕೊಲೆ; ಪ್ರಕರಣ ದಾಖಲು
ಮನೆಯ ಮುಂದೆ ಅಪರಿಚಿತ ವ್ಯಕ್ತಿ ಬಾಗಿಲು ಬಡಿಯುತ್ತಿರುವುದನ್ನು ಕಂಡು ಗಾಬರಿಗೊಂಡ ದೂರುದಾರರು ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಇಆರ್‌ವಿ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದಾರೆ. ಆತ ಅತಿಯಾಗಿ ಮದ್ಯಪಾನ ಮಾಡಿದ್ದು, ತಂಗಿಯ ಮನೆ ಹುಡುಕುವ ಗೊಂದಲದಲ್ಲಿ ಬೇರೆ ಮನೆ ಬಾಗಿಲು ಬಡಿದಿರುವುದು ಬೆಳಕಿಗೆ ಬಂದಿದೆಬಳಿಕ ಪೊಲೀಸರು ಆತನಿಗೆ ಸೂಕ್ತ ತಿಳುವಳಿಕೆ ಹಾಗೂ ಕಡಕ್ ಎಚ್ಚರಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ.
