Shopkeeper ಶಿವಮೊಗ್ಗ: ಸಿಗರೇಟ್ ಇಲ್ಲ ಎಂದಿದ್ದಕ್ಕೆ ಸಿಟ್ಟಾದ ಯುವಕರು ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು ಇ-ಪೇಪರ್ ಓದಿ
ಘಟನೆಯ ವಿವರ
ಶಿವಮೊಗ್ಗದ ಪ್ರದೇಶವೊಂದರಲ್ಲಿ ವೃದ್ಧೆಯೊಬ್ಬರು ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದಾರೆ. ಒಂದು ದಿನ ಇಬ್ಬರು ಅಪರಿಚಿತ ಯುವಕರು ವೃದ್ಧೆಯ ಅಂಗಡಿಗೆ ಬಂದು ಸಿಗರೇಟ್ ಇದೆಯೇ ಎಂದು ಕೇಳಿದ್ದಾರೆ. ಅದಕ್ಕೆ ವೃದ್ಧೆಯು ಸಿಗರೇಟ್ ಸ್ಟಾಕ್ ಖಾಲಿಯಾಗಿದೆ, ಇಲ್ಲ ಎಂದು ಹೇಳಿದ್ದಾರೆ.
ಇದರಿಂದ ಸಿಟ್ಟಾದ ಯುವಕರು, ಸಿಗರೇಟ್ ಇಲ್ಲದಿದ್ದರೆ ಏಕೆ ಅಂಗಡಿ ಇಟ್ಟುಕೊಂಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ವೃದ್ಧೆಯನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಆಕೆಯನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ. ಇನ್ನು ಮುಂದೆ ಅಂಗಡಿ ಹೇಗೆ ನಡೆಸುತ್ತೀಯೋ ನೋಡೋಣ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
