SHIVAMOGGA NEWS TODAY

ಶಿವಮೊಗ್ಗ: ಹೇಳಿದ ಜಾಗಕ್ಕೆ ಬರಲಿಲ್ಲವೆಂದು ಆಟೋ ಚಾಲಕನ ಮೇಲೆ ಬ್ಲೇಡ್‌ನಿಂದ ಹಲ್ಲೆ; ಮೂವರ ವಿರುದ್ಧ ಎಫ್‌ಐಆರ್!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ಕೇಳಿದ ಜಾಗಕ್ಕೆ ಆಟೋ ಬಿಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಂದಿಗೆ ಗಲಾಟೆ ತೆಗೆದು, ಆತನ ಮೇಲೆ ಮೂವರು ಯುವಕರು ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಘಟನೆ ನಗರದ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಆಟೋ ಚಾಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ :  ಶಾಸಕ ರಿಜ್ವಾನ್ ಅರ್ಷದ್‌ಗೆ ಸಚಿವ ಸ್ಥಾನಕ್ಕಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

Shimoga ಘಟನೆಯ ವಿವರ

ಎಫ್​​ ಐ ಆರ್​​ನಲ್ಲಿ ಇರುವಂತೆ  ಆಟೋ ಚಾಲಕ  ಜೂನ್ 15ರ ಸಂಜೆ ಸುಮಾರು 7:50ರ ಸಮಯದಲ್ಲಿ ಚಾಲಕ ಶಿವಮೊಗ್ಗದ ಜೈಲ್ ಸರ್ಕಲ್ ಆಟೋ ಸ್ಟ್ಯಾಂಡ್‌ನಲ್ಲಿದ್ದಾಗ ಮೂವರು ಅಪರಿಚಿತ ಯುವಕರು ಬಂದು ವಾಜಪೇಯಿ ಲೇಔಟ್‌ಗೆ ಬಾಡಿಗೆಗೆ ಬರುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಆಟೋ ಚಾಲಕ 200 ರೂಪಾಯಿ ಚಾರ್ಜ್ ಆಗುತ್ತದೆ ಎಂದು ಹೇಳಿದ್ದು, ಅದಕ್ಕೆ ಒಪ್ಪಿದ ಯುವಕರು ಆಟೋ ಹತ್ತಿದ್ದಾರೆ. 

ಆಟೋ ಚಾಲಕ ವಾಜಪೇಯಿ ಲೇಔಟ್ ತಲುಪಿದಾಗ ಅಲ್ಲಿ ಒಳಗಡೆ ತುಂಬಾ ಕತ್ತಲೆ ಇತ್ತು. ಈ ಕಾರಣಕ್ಕೆ ಚಾಲಕ ನಾನು ಅಷ್ಟೊಂದು ಒಳಗಡೆ ಬರುವುದಿಲ್ಲ ಎಂದು ವಾಜಪೇಯಿ ಬಡಾವಣೆಯ ಆರ್ಚ್ ಬಳಿಯೇ ಹೇಳಿದ್ದಾನೆ. ಇದರಿಂದ ಕೋಪಗೊಂಡ ಆ ಮೂವರು ಯುವಕರು ತಮಗೆ ಬಾಡಿಗೆ ಕೊಡುವುದಿಲ್ಲ ಎಂದು ಜಗಳ ತೆಗೆದಿದ್ದಾರೆ. ಚಾಲಕ ಆರ್ಚ್‌ನಿಂದ ಸ್ವಲ್ಪ ದೂರ ಅಂದರೆ ಸುಮಾರು 100 ಮೀಟರ್ ಒಳಗಡೆ ಹೋದಾಗ, ಆಟೋದಿಂದ ಕೆಳಗಿಳಿದ ಯುವಕರು ಚಾಲಕನ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಳಿ ಇದ್ದ ಬ್ಲೇಡ್ ತೆಗೆದುಕೊಂಡು ಆಟೋ ಚಾಲಕನ ಎಡಗೈ ಹಾಗೂ ಹೊಟ್ಟೆಯ ಬಲ ಭಾಗಕ್ಕೆ ಕೋಯ್ದು ಗಾಯಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕೈಯಿಂದ ಬೆನ್ನಿನ ಭಾಗಕ್ಕೆ ಗುದ್ದಿ, ನಿನ್ನನ್ನು ಜೀವಸಮೇತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆಟೋ ಚಾಲಕ ಆರೋಪಿಸಿದ್ದಾರೆ. 

Shimoga Auto Driver Slashed with Blade

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.