HOLEHONNUR KARNATAKA

ಹೊಳೇಹೊನ್ನೂರು: ತೋಟದಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ!

Python Rescued in Holehonnur
Python Rescued in Holehonnur
ಶೇರ್ ಮಾಡಿ WhatsApp Facebook X

ಶಿವಮೊಗ್ಗ: ಜಿಲ್ಲೆಯ ಹೊಳೇಹೊನ್ನೂರಿನ ಕನಸಿನಕಟ್ಟೆ ಗ್ರಾಮದ ಮನೆಯೊಂದರ ಬಳಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು ಇ-ಪೇಪರ್​ ಓದಿ

Python Rescued ಘಟನೆಯ ವಿವರ

ಕನಸಿನಕಟ್ಟೆ ಗ್ರಾಮದ ನಿವಾಸಿ ಈಶ್ವರಪ್ಪ ಎಂಬುವವರು ತಮ್ಮ ತೋಟದಲ್ಲಿ ಕಳೆ ಮಿಷನ್​ ಹೊಡೆಸುತ್ತಿದ್ದರು. ಈ ವೇಳೆ ತೋಟದಲ್ಲಿದ್ದ ಹೆಬ್ಬಾವು ಮಿಷನ್‌ನ ಶಬ್ದಕ್ಕೆ ಹೆದರಿ ತೋಟದ ಪಕ್ಕದಲ್ಲೇ ಇದ್ದ ಮನೆ ಬಳಿ ಬಂದಿದೆ. ಇದನ್ನು ಕಂಡು ಗಾಬರಿಗೊಂಡ ಮನೆಯವರು ಕೂಡಲೇ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್,ಮಾಡಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ. ಹಾವನ್ನು ರಕ್ಷಿಸಿದ ಬಳಿಕ ಮಾತನಾಡಿದ ಸ್ನೇಕ್ ಕಿರಣ್, ಈ ಸಮಯದಲ್ಲಿ ಇಂತಹ ಹಾವುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹೆಬ್ಬಾವು ಮನುಷ್ಯರನ್ನು ನುಂಗುತ್ತದೆ ಎಂಬಂತಹ ವದಂತಿಗಳನ್ನು ಯಾರೂ ನಂಬಬೇಡಿ. ಆದರೆ, ಆದಷ್ಟು ಮನೆಯ ಸುತ್ತಮುತ್ತಲಿನ ಜಾಗದ ಬಗ್ಗೆ ಜಾಗೃತರಾಗಿರಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಜಾಗೃತಿಯ ಮಾಹಿತಿಯನ್ನು ನೀಡಿದರು.

ರಕ್ಷಿಸಲಾದ ಈ ಹೆಬ್ಬಾವು ಸುಮಾರು 7.5 ಅಡಿ ಉದ್ದ ಹಾಗೂ 9.5 ಕೆ.ಜಿ ತೂಕವಿದ್ದು, ಅದನ್ನು ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಅರಣ್ಯ ಇಲಾಖೆಯ ಕಾಡಿಗೆ ತಂದು ಬಿಟ್ಟಿದ್ದಾರೆ.

Python Rescued in Holehonnur

Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor