SHIVAMOGGA NEWS TODAY

 ಶಿವಮೊಗ್ಗ : ಜಲ್​ ಜೀವನ್​ ಮಿಷನ್​ ಯೋಜನೆಯ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್​ ಕದ್ದ ಕಳ್ಳ ಪೊಲೀಸರ ಬಲೆಗೆ?

jal Jeevan Mission Pipe Theft Case Solved
jal Jeevan Mission Pipe Theft Case Solved
ಶೇರ್ ಮಾಡಿ WhatsApp Facebook X

ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ್ ಜೀವನ್ ಮಿಷನ್ ಯೋಜನೆಗಾಗಿ ತರಲಾಗಿದ್ದ ಭಾರಿ ಮೌಲ್ಯದ ಪೈಪ್‌ಗಳನ್ನು ಕಳವು ಮಾಡಿದ್ದ ಕಳ್ಳನ್ನು ಹೊಳೆಹೊನ್ನೂರು ಪೊಲೀಸರು  ಬಂಧಿಸಿದ್ದಾರೆ.

ಶಿವಮೊಗ್ಗ :  ಶಾಸಕ ರಿಜ್ವಾನ್ ಅರ್ಷದ್‌ಗೆ ಸಚಿವ ಸ್ಥಾನಕ್ಕಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ಘಟನೆ ವಿವರ

ಪೈಪ್‌ಲೈನ್ ಕಾಮಗಾರಿಯ ಇಂಜಿನಿಯರ್ ಒಬ್ಬರು ಜೂನ್ 11, 2026 ರಂದು ತಮ್ಮ ವ್ಯಾಪ್ತಿಯಲ್ಲಿ ಇರಿಸಲಾಗಿದ್ದ 18 ಬಂಡಲ್ ಜಲ್ ಜೀವನ್ ಮಿಷನ್ ಪೈಪ್‌ಗಳು ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು.  ಈ ಹಿನ್ನೆಲೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಬೇಧಿಸಲು ಪೊಲೀಸರು ವಿಷೇಶ ತಂಡವನ್ನು ರಚಿಸಿದ್ದರು. ಭದ್ರಾವತಿ ಉಪವಿಭಾಗದ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಅವರ ಉಸ್ತುವಾರಿಯಲ್ಲಿ, ಹೊಳೆಹೊನ್ನೂರು ಪಿಐ ಶಿವಪ್ರಸಾದ್ ಎಂ ನೇತೃತ್ವದ ತಂಡವು ಕಾರ್ಯಾಚರಣೆಗೆ ಇಳಿದಿತ್ತು.

ಜೂನ್ 13, 2026 ರಂದು ಖಚಿತ ಮಾಹಿತಿ ಮೇರೆಗೆ ಭದ್ರಾವತಿ ತಾಲ್ಲೂಕಿನ ನಾಗತಿ ಬೆಳಗಲು ಗ್ರಾಮದ ನಿವಾಸಿಯಾದ ರಾಕೇಶ (30 ವರ್ಷ) ಎಂಬಾತನನ್ನು ಪೊಲೀಸರು  ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಅಂದಾಜು 7,92,000 ರೂಪಾಯಿ ಮೌಲ್ಯದ ಕಳುವಾಗಿದ್ದ ಎಲ್ಲಾ 18 ಬಂಡಲ್ ಪೈಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

jal Jeevan Mission Pipe Theft Case Solved

Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor