ಶಿವಮೊಗ್ಗ:  ಜೂನ್ 5 ಮತ್ತು ಜೂನ್ 6 ರಂದು ನಗರದ ಹಲವೆಡೆ ಪವರ್ ಕಟ್

ಹಂಚಿಕೊಳ್ಳಿ
WhatsApp Facebook X Telegram
Shivamogga Power Cut
Shivamogga Power Cut

Power Cut ಶಿವಮೊಗ್ಗ : ಶಿವಮೊಗ್ಗ ನಗರದ ಪ್ರಮುಖ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ಹಾಗೂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಜೂನ್ 05 ರ ಶುಕ್ರವಾರ ಮತ್ತು ಜೂನ್ 06 ರ ಶನಿವಾರದಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಆನೆ ಜೊತೆಗೆ ಕಿರಿಕ್​ ಪಾರ್ಟಿ, ಲೇಡಿಗೆ ಆಟೋ ಡ್ರೈವರ್​ ಕಾಟ, ಸಮಾಜಕ್ಕೆ ಗ್ರೇಟ್ ಎನಿಸಿದ ಭದ್ರಾವತಿ ನರ್ಸ್​! ಬೆಳಗಿನ ಶಿವಮೊಗ್ಗ ಸುದ್ದಿ

ಅಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಎಫ್-12ರಲ್ಲಿ ತುರ್ತು ದುರಸ್ತಿ ಕಾಮಗಾರಿ ಇರುವ ಕಾರಣ ಜೂನ್ 05 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5:00 ರವರೆಗೆ ಅಲ್ಕೋಳ, ಎಸ್.ಎ.ಲ್.ವಿ ಬಡಾವಣೆ, ಗಜಾನನ ಲೇಔಟ್, ಐಶ್ವರ್ಯ ಬಡಾವಣೆ, ಜೆ.ಹೆಚ್. ಪಟೇಲ್ ಬಡಾವಣೆ ಎ ಯಿಂದ ಎಫ್ ಬ್ಲಾಕ್ ವರೆಗೆ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಬಡಾವಣೆ, ಆದರ್ಶ ನಗರ, ಸಹ್ಯಾದ್ರಿನಗರ, ಸೋಮಿನಕೊಪ್ಪ, ವಿಜಯಲಕ್ಷ್ಮೀ ಲೇಔಟ್, ಸೋಮನಾಥ ಬಡಾವಣೆ, ನಿಸರ್ಗ ಲೇಔಟ್, ಹೊಂಗಿರಣ ಬಡಾವಣೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ಇನ್ನು ಜೂನ್ 06 ರ ಶನಿವಾರದಂದು ನಗರದ 110/11 ಕೆ.ವಿ. ವಿ.ವಿ.ಕೇಂದ್ರ ಹಾಗೂ ಎಮ್.ಆರ್.ಎಸ್. ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದ ಅಂದು ಬೆಳಗ್ಗೆ 09:00 ರಿಂದ ಸಂಜೆ 05:00 ರವರೆಗೆ ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರ ನಗರ,  ಶಾಂತಮ್ಮ ಲೇಔಟ್, ವೆಂಕಟೇಶನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಮ್.ಆರ್.ಎಸ್. ವಾಟರ್ ಸಪ್ಲೈ, ಎಮ್.ಆರ್.ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್ ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ. 

ಅದೇ ದಿನ ಬಿ.ಹೆಚ್. ರಸ್ತೆ ಗಾಯತ್ರಿ ಕಲ್ಯಾಣ ಮಂಟಪದಿಂದ ಅಮೀರ್ ಅಹಮದ್ ವೃತ್ತದವರೆಗೆ, ನೆಹರು ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಪಾರ್ಕ್ ಬಡಾವಣೆ, ಸರ್.ಎಂ.ವಿ. ರಸ್ತೆ ವೀರಭದ್ರೇಶ್ವರ ಚಿತ್ರ ಮಂದಿರದಿಂದ ಮಹಾವೀರ ವೃತ್ತದವರೆಗೆ, ಬಾಲರಾಜ್ ಅರಸ್ ರಸ್ತೆ ಮಹಾವೀರ ವೃತ್ತದಿಂದ ಗೋಪಿ ವೃತ್ತದವರೆಗೆ, ಗಾಂಧಿ ಪಾರ್ಕ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿಯೂ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದ್ದು, ಸಾರ್ವಜನಿಕರು ಮೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

Power Cut Scheduled Electricity Outage in Shimoga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor