25 ವರ್ಷವಾದರು ಮರಳಿ ಬಾರದ ವ್ಯಕ್ತಿ, ಇಬ್ಬರು ಮಕ್ಕಳೊಂದಿಗೆ ತೆರಳಿದ ಗೃಹಿಣಿ ನಾಪತ್ತೆ, ಪ್ರತ್ಯೇಕ ಪ್ರಕರಣ, ಮಾಹಿತಿಗಾಗಿ ಪೊಲೀಸ್ ಪ್ರಕಟಣೆ 

ಹಂಚಿಕೊಳ್ಳಿ
WhatsApp Facebook X Telegram
Shimoga Man Missing for 25 Years
Shimoga Man Missing for 25 Years

Shimoga ತೀರ್ಥಹಳ್ಳಿ :  ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರು ಮನೆಯಿಂದ ಹೊರಗೆ ಹೋದವರು 25  ವರ್ಷಗಳಾದರೂ ಮರಳಿ ಬಾರದೆ ಕಾಣೆಯಾಗಿದ್ದಾರೆ. ಈ ಕುರಿತು ಸಾರ್ವಜನಿಕರಲ್ಲಿ ಯಾವುದೇ ಸುಳಿವು ಇದ್ದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. 

ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರ ಡಿಪಿ ಬಳಸಿ ವಂಚಿಸಲು ಯತ್ನ: ದೂರು ದಾಖಲು 

ಕಾಣೆಯಾದ ವ್ಯಕ್ತಿಯನ್ನು ರಂಗಪ್ಪ ನಾಯ್ಕ ಅವರ ಪುತ್ರ ಟಿ.ಆರ್. ಜಗನ್ನಾತ ಎಂದು ಗುರುತಿಸಲಾಗಿದೆ. ಇವರು ಸುಮಾರು 5.9 ಅಡಿ ಎತ್ತರ, ದುಂಡನೆಯ ಮುಖ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಇವರು ಕನ್ನಡಕ ಧರಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ಸಂಖ್ಯೆಗಳು

  • ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ಸಾರ್ವಜನಿಕರು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:
  • ಪಿ.ಎಸ್.ಐ. ಮಾಳೂರು ಠಾಣೆ: 08181-235142, ಮೊ: 9480803353
  • ಸಿಪಿಐ ಮಾಳೂರು ವೃತ್ತ: 08181-228310, ಮೊ: 9480803333
  • ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ: 08182-261413, ಮೊ: 9480803300

ಶಿಕಾರಿಪುರ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ; ಸುಳಿವು ನೀಡುವಂತೆ ಮನವಿ

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿವೆಮನೆ ಗ್ರಾಮದ ಮಹಿಳೆಯೊಬ್ಬರು ತನ್ನ ಇಬ್ಬರು ಹೆತ್ತ ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. ಕಳೆದ ಮೇ 31 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಸ್ಸಾಗಿಲ್ಲ ಎಂದು ತಿಳಿದುಬಂದಿದೆ. 

ನಾಪತ್ತೆಯಾದ ಗೃಹಿಣಿಯ ವಿವರಗಳು

ಪೂರ್ಣಿಮಾ (27 ವರ್ಷ): ಕಣಿವೆಮನೆ ಗ್ರಾಮದ ಮಹೇಶ್ ಎಂಬುವವರ ಪತ್ನಿ. 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಆಕಾಶ ನೀಲಿ ಬಣ್ಣದ ಚೂಡಿದಾರ ಮತ್ತು ಬಿಳಿ ಬಣ್ಣದ ವೇಲ್ ಧರಿಸಿದ್ದರು. 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು

  • ಈ ತಾಯಿ ಹಾಗೂ ಇಬ್ಬರು ಮಕ್ಕಳ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ಈ ಕೆಳಗಿನ ನಂಬರ್‌ಗಳಿಗೆ ಕರೆ ಮಾಡಲು ಕೋರಲಾಗಿದೆ:
  • ಜಿಲ್ಲಾ ಪೊಲೀಸ್ ಕಚೇರಿ, ಶಿವಮೊಗ್ಗ: 08182-261413
  • ಡಿ.ಎಸ್.ಪಿ ಶಿಕಾರಿಪುರ ಉಪ ವಿಭಾಗ: 08187-222443, ಮೊ: 9480803323
  • ಪಿ.ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ: 08187-222443, ಮೊ: 9480803366
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor