SHIVAMOGGA NEWS TODAY

ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರ ಡಿಪಿ ಬಳಸಿ ವಂಚಿಸಲು ಯತ್ನ: ದೂರು ದಾಖಲು 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ :  ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹೆಸರು ಹಾಗೂ ಅವರ ಪೋಟೋವನ್ನು ದುರುಪಯೋಗಪಡಿಸಿಕೊಂಡು, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರಿಗೆ ನಕಲಿ ವಾಟ್ಸಾಪ್ ಮೆಸೇಜ್​  ಕಳುಹಿಸಿ ಹಣ ವಂಚಿಸಲು ಯತ್ನಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಈ ಪ್ರದೇಶಗಳಲ್ಲಿ ಮೇ 31 ರಂದು ವಿದ್ಯುತ್ ವ್ಯತ್ಯಯ 

Cyber Frauds ಘಟನೆಯ ವಿವರ   

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ಈ ಕುರಿತು ದೂರನ್ನು ನೀಡಿದ್ದಾರೆ. ಎಫ್​​ ಐ ಆರ್​​ನಲ್ಲಿರುವಂತೆ  ಸೈಬರ್ ವಂಚಕರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ಜಿ.ಎ. ಅವರ ಹೆಸರು ಹಾಗೂ ಪೋಟೋವನ್ನು ಕದ್ದು ಬಳಸಿಕೊಂಡಿದ್ದಾರೆ. ನಂತರ ವಿದೇಶಿ ಕೋಡ್ ಹೊಂದಿರುವಮೊಬೈಲ್ ಸಂಖ್ಯೆಯ ಮೂಲಕ ನಕಲಿ ವಾಟ್ಸಾಪ್ ಖಾತೆಯನ್ನು ತೆರೆದು, ಅದಕ್ಕೆ ನ್ಯಾಯಾಧೀಶರ ಡಿಪಿ ಅಳವಡಿಸಿದ್ದಾರೆ.

ಬಳಿಕ ತಾವೇ ನ್ಯಾಯಾಧೀಶರಂತೆ ನಟಿಸಿ, ನ್ಯಾಯಾಲಯದ ಸಿಬ್ಬಂದಿಗಳಿಗೆ ಮತ್ತು ವಕೀಲರಿಗೆ ವಾಟ್ಸಾಪ್ ಮೂಲಕ ಸಂದೇಶಗಳನ್ನು ರವಾನಿಸಿದ್ದಾರೆ. ಅರ್ಜೆಂಟಾಗಿ ಈ ಮೇಸೇಜ್​ನಲ್ಲಿ ನಮೂದಿಸಿರುವ ಅಕೌಂಟ್ ನಂಬರ್‌ಗೆ 50,000 ರೂಪಾಯಿ ಹಣವನ್ನು ಕಳುಹಿಸಿ ಎಂದು ತುರ್ತು ಹಣದ ಬೇಡಿಕೆ ಇಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. 

ಈ ವಂಚನೆಯ ಜಾಲವನ್ನು ಸಕಾಲದಲ್ಲಿ ಗುರುತಿಸಿದ್ದರಿಂದ ಸದ್ಯಕ್ಕೆ ಯಾವುದೇ ಆರ್ಥಿಕ ನಷ್ಟ ಸಂಭವಿಸಿದ ವರದಿಯಾಗಿಲ್ಲ. ಸದ್ಯ ಸೈಬರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Cyber Frauds Use Shimoga District Judge Photo

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.