ಶಿವಮೊಗ್ಗ : ವ್ಯಾಟ್ಸಾಪ್​​ ಗ್ರೂಪ್​​ಗೆ ಜಾಯಿನ್​​ ಆಗಿ 20 ದಿನಕ್ಕೆ 6 ಲಕ್ಷ ಹೋಯ್ತು, ಏನಿದು ಪ್ರಕರಣ

ಹಂಚಿಕೊಳ್ಳಿ
WhatsApp Facebook X Telegram
Shivamogga Cyber Crime
Shivamogga Cyber Crime

ಶಿವಮೊಗ್ಗ : ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸ್‌ಆಪ್ ಗ್ರೂಪ್ ಮೂಲಕ ಪರಿಚಯವಾದ ಅಪರಿಚಿತ ವಂಚಕರನ್ನು ನಂಬಿ, ಕೇವಲ 20 ದಿನಗಳ ಅಂತರದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರು  ಬರೋಬ್ಬರಿ 6.87 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಶಿವಮೊಗ್ಗದ ಸಿ.ಇ.ಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ : 23 ವರ್ಷದ ಯುವತಿ ಕಾಣೆ : ಪತ್ತೆಗಾಗಿ ಪೊಲೀಸ್​​​ ಪ್ರಕಟಣೆ

Shimoga Cyber Fraud ಘಟನೆ ವಿವರ

ದೂರುದಾರರು ಜೂನ್ 18, 2026 ರಂದು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಾಗ F-85 Growth Investing ಎಂಬ ವಾಟ್ಸ್‌ಆಪ್ ಗ್ರೂಪ್‌ಗೆ ಅವರ ನಂಬರ್  ಆ್ಯಡ್​​​ ಆಗಿರುವ  ಬಗ್ಗೆ ನೋಟಿಫಿಕೇಷನ್ ಬಂದಿತ್ತು. ವಾಟ್ಸ್‌ಆಪ್ ತೆರೆದು ನೋಡಿದಾಗ, ತಾವು Upstox Securities Pvt Ltd’ ಹಾಗೂ KKR & Co. Inc ಎಂಬ ಟ್ರೇಡಿಂಗ್ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ವಂಚಕರು, ತಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭಾಂಶ ಮಾಡಿಕೊಡುವುದಾಗಿ ಆಮಿಷ ಒಡ್ಡಿದ್ದರು. ವಂಚಕರ ಮಾತುಗಳನ್ನು ನಿಜವೆಂದು ನಂಬಿದ ದೂರು ವಾಟ್ಸ್‌ಆಪ್ ಮೆಸೇಜ್ ಮೂಲಕವೇ ಮಾತುಕತೆ ನಡೆಸಿ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದರು. 

ಅದರಂತೆ ಜೂನ್ 18 ರಿಂದ ಜುಲೈ 09 ರವರೆಗೆ ಕೇವಲ 20 ದಿನಗಳ ಅವಧಿಯಲ್ಲಿ ದೂರುದಾರರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು ಐದು ಹಂತಗಳಲ್ಲಿ 6,87,000 ರೂಪಾಯಿಗಳನ್ನು ವಂಚಕರು ನೀಡಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ತದನಂತರ ತಾವು ಹೂಡಿಕೆ ಮಾಡಿದ ಹಣ ಮತ್ತು ಬಂದಿರುವ ಲಾಭವನ್ನು ಹಿಂಪಡೆಯಲು ಕೇಳಿದಾಗ, ವಂಚಕರು ಒಟ್ಟು ಮೊತ್ತದ ಶೇ. 16 ರಷ್ಟು ಕಮಿಷನ್ ಹಣವನ್ನು ಮುಂಗಡವಾಗಿ ಪಾವತಿಸಿದರೆ ಮಾತ್ರ ವಿತ್ ಡ್ರಾ ಮಾಡಲು ಅವಕಾಶ ನೀಡುವುದಾಗಿ ಷರತ್ತು ವಿಧಿಸಿದ್ದಾರೆ. ಆಗ ದೂರುದಾರರು ಬಂದಿರುವ ಲಾಭದಲ್ಲೇ ಶೇ. 16 ರಷ್ಟು ಕಮಿಷನ್ ಕಡಿತಗೊಳಿಸಿಕೊಂಡು ಬಾಕಿ ಹಣವನ್ನು ನೀಡುವಂತೆ ಕೇಳಿಕೊಂಡಾಗ ವಂಚಕರು ಅದಕ್ಕೆ ನಿರಾಕರಿಸಿದ್ದಾರೆ. 

ಇದರಿಂದ ಅನುಮಾನಗೊಂಡ ದೂರುದಾರರು ತಮ್ಮ ಗೆಳೆಯನ ಬಳಿ ವಿಷಯ ತಿಳಿಸಿದಾಗ, ಇದು ಸೈಬರ್ ವಂಚನೆ ಎಂಬುದು ಸ್ಪಷ್ಟವಾಗಿದೆ. ತಾವು ಮೋಸ ಹೋಗಿರುವುದನ್ನು ಅರಿತ ದೂರುದಾರ ಅಪರಿಚಿತ ಸೈಬರ್ ಖದೀಮರ ವಿರುದ್ಧ  ಶಿವಮೊಗ್ಗದ ಸಿ ಇ ಎನ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಕಲಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor