ಬೆಂಗಳೂರು-ಶಿವಮೊಗ್ಗ ಟ್ರೈನ್​ನಲ್ಲಿ ಸಿಕ್ಕ ಟಿಟಿನೇ ಫೇಕ್! ರಾಗಿಗುಡ್ಡದಲ್ಲಿ Rcb ಕ್ರಿಕೆಟ್ ಕಿರಿಕ್, ಮದುವೆಗೆ ನೋ ಎಂದ ವರ! ದಾಖಲಾಯ್ತು ಕೇಸ್ !ಜಸ್ಟ್ ಶಿವಮೊಗ್ಗ

ಹಂಚಿಕೊಳ್ಳಿ
WhatsApp Facebook X Telegram
shivamogga police image
ಪತ್ನಿಯ ಜೊತೆ ಮಾತನಾಡಿದ್ದಕ್ಕೆ ಅಟೆಂಪ್ಟು ಮರ್ಡರ್ ಕೇಸ್ : ಕಾರು ಡಿಕ್ಕಿ ಹೊಡೆಸಿ ಕೊಲೆ ಯತ್ನ!

ಜಸ್ಟ್ ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳು, ಪ್ರಸಂಗಗಳು, ವಿಷಯಗಳನ್ನು ಕುರಿತಾಗಿ ವಿವರಿಸುವ ಇವತ್ತಿನ ಮಾರ್ನಿಂಗ್​ ಬುಲೆಟಿನ್​ನ ಸುದ್ದಿಗಳನ್ನ ಗಮನಿಸುವುದಾದರೆ, ವಿವರ ಹೀಗಿದೆ.

ಜಸ್ಟ್ ಶಿವಮೊಗ್ಗ : ನಕಲಿ ಟಿಟಿ ವಶಕ್ಕೆ

ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಸಂಚರಿಸುವ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಕಲಿ ಟಿಟಿಯೊಬ್ಬ ಮತ್ತೊಬ್ಬ ಅಸಲಿ ಟಿಟಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಈತನನ್ನು ಅರಸೀಕೆರೆ ಜಿಆರ್‌ಪಿ ಠಾಣೆಯ ಪೊಲೀಸರ ವಶಕ್ಕೆ ನೀಡಲಾಗಿದೆ. ಜೂನ್ 1ರಂದು ನಡೆದ ಘಟನೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ ಶಿವಮೊಗ್ಗ ಟೌನ್ ಕಡೆಗೆ ತೆರಳುತ್ತಿದ್ದ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ರೈಲು ನಿಲ್ದಾಣವನ್ನು ದಾಟಿತ್ತು.

ಈ ವೇಳೆ ರೈಲಿನ ಸಿ-1 ಬೋಗಿಯಲ್ಲಿ ಟಿಕೆಟ್ ಪರಿಶೀಲನೆ ನಡೆಸ್ತಿದ್ದ ಅಸಲಿ ಅಧಿಕಾರಿ ಡೆಪ್ಯುಟಿ ಸಿಟಿಐ ಯಶವಂತ್ ಜೆ. ಅವರಿಗೆ ಮತ್ತೋರ್ವ ಟಿಟಿಇ ಎದುರಾಗಿದ್ದಾನೆ. ಆತನ ವರ್ತನೆ ಬಗ್ಗೆ ಅನುಮಾನಗೊಂಡ ಅವರು, ವಿಚಾರಣೆ ನಡೆಸಿದಾಗ, ಮೊಬೈಲ್ ಫೋನ್ ಮೂಲಕ ನಕಲಿ ಗುರುತಿನ ಚೀಟಿ ತೋರಿಸಿದ್ದ. ಇದರಿಂದ ಇನ್ನಷ್ಟು ಸಂಶಯಗೊಂಡ ಅಧಿಕಾರಿ, ಇನ್ನಷ್ಟು ಸಿಬ್ಬಂದಿಯನ್ನ ಕರೆಸಿಕೊಂಡು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಶಿವಮೊಗ್ಗ ಜಿಲ್ಲೆಗೆ ಸೇರಿದ 26 ವರ್ಷದ ಯುವಕ ಎಂಬುದು ಗೊತ್ತಾಗಿದೆ. ಆತ ರೈಲ್ವೆ ಉದ್ಯೋಗಿಯಲ್ಲಿ ಹಣಕ್ಕಾಗಿ ಟಿಟಿ ಸಮವಸ್ತ್ರ ಧರಿಸಿದ್ದ ಎಂಬುದು ಗೊತ್ತಾಗಿದೆ. ಈ ಸಂಬಂಧ ರೈಲ್ವೆ ಇಲಾಖೆಯು ಪ್ರಕಟಣೆ ನೀಡಿದ್ದು, ಆರೋಪಿಯನ್ನು ಅರಸೀಕೆರೆ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ

ಜಸ್ಟ್ ಶಿವಮೊಗ್ಗ : ಕ್ರಿಕೆಟ್ ಮ್ಯಾಚ್​ ಕಿರಿಕ್

ಶಿವಮೊಗ್ಗದ ರಾಗಿಗುಡ್ಡ ದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಕಿರಿಕ್ ಆಗಿದೆ. ಮಕ್ಕಳು ಪಟಾಕಿ ಸಿಡಿಸುತ್ತಿದ್ದಾಗ, ಅವರಿಗೆ ತೊಂದರೆ ನೀಡುತ್ತಿದ್ದ ಯುವಕರ ಗುಂಪನ್ನು ತಡೆದ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದಿದ್ದಾರೆ. ಮೇ 31ರ ರಾತ್ರಿ ಈ ಘಟನೆ ನಡೆದಿದ್ದು ಎಫ್​ಐಆರ್​ ದಾಖಲಾಗಿದೆ. ಸಂತ್ರಸ್ತರು, ಕ್ರಿಕೆಟ್ ಮ್ಯಾಚ್​ ಮುಗಿಸಿ ಹೋಗುತ್ತಿದ್ದಾಗ, ರಾಗಿಗುಡ್ಡದಲ್ಲಿ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಯುವಕರ ಗುಂಪೊಂದು ಮಕ್ಕಳಿಗೆ ಕಿರುಕುಳ ನೀಡುತ್ತಿತ್ತು. ಇದನ್ನು ಗಮನಿಸಿದ ಸಂತ್ರಸ್ತರು ಮಕ್ಕಳಿಗೆ ತೊಂದರೆ ಕೊಡಬೇಡಿ ಎಂದಿದ್ದಾರೆ. ಇದಕ್ಕೆ ಕೆರಳಿದ ಗುಂಪು ಸಂತ್ರಸ್ತರ ಮೇಲೆ ಹಲ್ಲೆ ಮಾಡಿದೆ . ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ಆಗಿದೆ.

ಜಸ್ಟ್ ಶಿವಮೊಗ್ಗ : ಮದುವೆಗೆ ನೋ ಎಂದ ವರ! ದಾಖಲಾಯ್ತು ಕೇಸ್

ಇನ್ನೊಂದು ಪ್ರಕರಣದಲ್ಲಿ, ಪ್ರೇಮ ವಿವಾಹವಾಗಲು ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ್ದ ದಿನವೇ ವರ ನಿಗೂಢವಾಗಿ ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ.ಅಲ್ಲದೆ ಈ ಯುವಕನ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬಲವಂತದ ಗರ್ಭಪಾತ, ಜೀವ ಬೆದರಿಕೆ ಮತ್ತು ಹಣಕಾಸು ವಂಚನೆ ಸೇರಿ ಹಲವು ಗಂಭೀರ ಆರೋಪದ ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಶಿವಮೊಗ್ಗದ ಸ್ಟೇನ್​ ಒಂದರಲ್ಲಿ ದಾಖಲಾದ ಪ್ರಕರಣ ಪ್ರಕಾರ 2023ರಿಂದ ಮಹಿಳೆಯೊಬ್ಬರ ಜೊತೆ ಸಂಪರ್ಕದಲ್ಲಿ ವರನ ವಿವಾಹ ನೋಂದಣಿ ಮೇ 25ರಂದು ನಡೆಯಬೇಕಿತ್ತು. ಆದರೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸೇರಿದ್ದಾಗ, ಸ್ವಲ್ಪ ಹೊತ್ತಿನಲ್ಲಿ ಬರುತ್ತೇನೆ ಎಂದು ಹೇಳಿ ಹೋದ ವರ ಕಾಣೆಯಾಗಿದ್ಧಾನೆ. ಈ ಸಂಬಂದ ಸಂತ್ರಸ್ತ ಮಹಿಳೆಯ ಪೊಲೀಸ್ ಕೇಸ್ ಮಾಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor