ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ನೇರ ಸಂದರ್ಶನ: ಐಟಿಐ, ಡಿಪ್ಲೊಮಾ ಪದವೀಧರರಿಗೆ ಸುವರ್ಣಾವಕಾಶ!

ಹಂಚಿಕೊಳ್ಳಿ
WhatsApp Facebook X Telegram
Shivamogga Jobಸಾಂದರ್ಭಿಕ ಚಿತ್ರ
Shivamogga Jobಸಾಂದರ್ಭಿಕ ಚಿತ್ರ

Shivamogga ಶಿವಮೊಗ್ಗ: ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಜೂನ್ 05 ರಂದು ಬೆಳಿಗ್ಗೆ 10:00 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ಬೃಹತ್ ನೇರ ಸಂದರ್ಶನವನ್ನು ಆಯೋಜಿಸಿದೆ. 

ಆಯನೂರು ಮಂಜುನಾಥ್, ನಾಗರಾಜ್ ಗೌಡ ಘರ್​ ವಾಪ್ಸಿ! ಕೆಪಿಸಿಸಿ ‘ಶಿವಮೊಗ್ಗ‘ ಚರ್ಚೆ! ಯಾರ್ಯಾರು ಏನಂದ್ರು?

ಈ ವಿಶೇಷ ನೇರ ಸಂದರ್ಶನ ಪ್ರಕ್ರಿಯೆಯಲ್ಲಿ ದೇಶದ ಮುಂಚೂಣಿ ಖಾಸಗಿ ಕಂಪನಿಗಳಾದ ಎನ್‌ಐಡಿಇಸಿ ಇಂಡಸ್ಟ್ರೀಯಲ್ ಆಟೋ ಮಷಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಎನ್‌ಟಿಟಿಎಫ್ ಪ್ರೈವೇಟ್ ಲಿಮಿಟೆಡ್ (NTTF) ಭಾಗವಹಿಸುತ್ತಿವೆ. ಕಂಪನಿಗಳಲ್ಲಿ ಸದ್ಯ ಖಾಲಿ ಇರುವ ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕವೇ ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈ ಸಂದರ್ಶನದಲ್ಲಿ ಭಾಗವಹಿಸಲು ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC), ಐಟಿಐ (ITI- ಎಲೆಕ್ಟ್ರಿಕಲ್, ಎಲೆಕ್ಟ್ರಿಷಿಯನ್, ಎಲೆಕ್ಟ್ರೋ ಮೆಕಾನಿಕಲ್, ಮೆಕಾನಿಕಲ್, ಫಿಟ್ಟರ್, ಟರ್ನರ್) ಹಾಗೂ ಡಿಪ್ಲೊಮಾ (ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ & ಕಮ್ಯೂನಿಕೇಷನ್) ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಅವಕಾಶವಿದೆ. 18 ರಿಂದ 24 ವರ್ಷದೊಳಗಿನ ಆಸಕ್ತ ಯುವಕರು ಈ ಸಂದರ್ಶನದ ಸದುಪಯೋಗ ಪಡೆದುಕೊಳ್ಳಬಹುದು. 

ಅಭ್ಯರ್ಥಿಗಳು ತಮ್ಮ ಇತ್ತೀಚಿನ ಸ್ವವಿವರಗಳ ಮಾಹಿತಿ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ “ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಖುದ್ದಾಗಿ ಹಾಜರಾಗಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಅಧಿಕೃತ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಈ ಉದ್ಯೋಗ ಮೇಳಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. 

ನೇರ ಸಂದರ್ಶನ ಮತ್ತು ಹುದ್ದೆಗಳ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಂದೇಹಗಳಿದ್ದಲ್ಲಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಮೊಬೈಲ್ ಸಂಖ್ಯೆಗಳಾದ 9380663606 ಅಥವಾ 9108235132 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Shivamogga Walk-in Interview on June 5

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor