ಸಕಲೇಶ​​ಪುರ ಯುವಕ ಶಿವಮೊಗ್ಗದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ

ಹಂಚಿಕೊಳ್ಳಿ
WhatsApp Facebook X Telegram
Sakleshpur Youth Sanketh Dies in Shivamogga
Sakleshpur Youth Sanketh Dies in Shivamogga

ಶಿವಮೊಗ್ಗ: ಹಾಸನ ಜಿಲ್ಲೆಯ ಸಕಲೇಶ​​ಪುರ ಮೂಲದ ಯುವಕನೊಬ್ಬ ಶಿವಮೊಗ್ಗ ನಗರದ ಹೊರವಲಯದ ಪುರಲೆ ಕೆರೆಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಸಕಲೇಶ್​​ಪುರದ ಸಂಕೇತ್​​ (19) ಆತ್ಮಹತ್ಯೆಗೆ ಶರಣಾದ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ. 

ಶಿವಮೊಗ್ಗ: ನರೇಂದ್ರ ಮೋದಿ ಅವರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್; ಸಿ ಇ ಎನ್​ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

ಘಟನೆಯ ವಿವರ

ಪ್ರಾಥಮಿಕ ಮೂಲಗಳ ಮಾಹಿತಿ ಪ್ರಕಾರ, ಮೃತ ಸಂಕೇತ್ ಇತ್ತೀಚೆಗಷ್ಟೇ ತನ್ನ ಐಟಿಐ (ITI) ವ್ಯಾಸಂಗವನ್ನು ಮುಗಿಸಿದ್ದನು. ಆದರೆ ಮುಂದೆ ಯಾವುದೇ ಕೆಲಸಕ್ಕೆ ಸೇರದೆ ಮನೆಯಲ್ಲೇ ಖಾಲಿ ಉಳಿದಿದ್ದನು. ಈ ಕಾರಣದಿಂದಾಗಿ ಆತನ ತಂದೆಯು ಕೆಲಸಕ್ಕೆ ಹೋಗುವಂತೆ ಮಗನಿಗೆ ತಿಳಿಹೇಳಿ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಘಟನೆಯು ಮೂರು ದಿನಗಳ ಹಿಂದೆಯೇ ಸಂಭವಿಸಿದೆ ಎನ್ನಲಾಗಿದ್ದು, ಇಂದು ಪುರಲೆ ಕೆರೆಯಲ್ಲಿ ಯುವಕನ ಶವ ತೇಲುತ್ತಿರುವುದು ಪತ್ತೆಯಾಗಿದೆ. ನೀರಿನ ಮೇಲ್ಭಾಗಕ್ಕೆ ಬಂದಿದ್ದ ಶವವನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

Sakleshpur Youth Sanketh Dies in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor