ಶಿವಮೊಗ್ಗ: ನರೇಂದ್ರ ಮೋದಿ ಅವರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್; ಸಿ ಇ ಎನ್​ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

ಹಂಚಿಕೊಳ್ಳಿ
WhatsApp Facebook X Telegram
FIR Filed in Shivamogga Against Facebook User 
FIR Filed in Shivamogga Against Facebook User 

FIR Filed ಶಿವಮೊಗ್ಗ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು AI ತಂತ್ರಜ್ಞಾನ ಬಳಸಿ ಬೇರೆ ದೇಶದ ಪ್ರಧಾನಿಯವರೊಂದಿಗೆ ಅಶ್ಲೀಲವಾಗಿ ಚಿತ್ರಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ಘಟನೆ ವಿವರ 

ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ವಿವರಗಳ ಪ್ರಕಾರ, ನಂಜೇ ಗೌಡ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಆರೋಪಿಯು ಪ್ರಧಾನಿ ಮೋದಿ ಅವರ ಫೋಟೋವನ್ನು ಮಹಿಳೆಯೊಬ್ಬರ ಜೊತೆ ಪ್ರಣಯದಲ್ಲಿ ತೊಡಗಿರುವಂತೆ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಅದಕ್ಕೆ AI ಬಂದಿದೆ ಅಂತ ಟೆಕ್ನಾಲಜಿನ ನಮ್ಮ ಹುಡುಗರು ಈ ಮಟ್ಟಕ್ಕೆಲ್ಲ ಬೆಡ್ ರೂಮಿಗೆ ಹೋಗಿ ಹೆಸರು ಕೆಡಿಸಬಾರದು, ಸುಬ್ರಹ್ಮಣ್ಯ ಸ್ವಾಮಿ ಬೇಜಾರು ಮಾಡ್ಕೊತಾರೆ ಎಂಬ ಕ್ಯಾಪ್ಷನ್ ಬರೆದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.

 ದೇಶದ ಅತ್ಯುನ್ನತ ಮತ್ತು ಗೌರವಾನ್ವಿತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಘನತೆಗೆ ಧಕ್ಕೆ ತರಲಾಗಿದೆ. ಸಮಾಜದಲ್ಲಿ ಶಾಂತಿ ಭಂಗ ಉಂಟುಮಾಡುವ ಕಡು ಉದ್ದೇಶದಿಂದಲೇ ಈ ರೀತಿಯ ಸುಳ್ಳು ಮತ್ತು ವಿಕೃತ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಜನರ ನಡುವೆ ರಾಜಕೀಯ ದ್ವೇಷದ ಕಿಡಿ ಹೊತ್ತಿಸಿ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಇಂತಹ ದೇಶದ್ರೋಹದ ಕೆಲಸದಲ್ಲಿ ಆರೋಪಿ ತೊಡಗಿಸಿಕೊಂಡಿದ್ದಾನೆ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಕೃತ್ಯವು ಸಮಾಜದಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ಗುಂಪುಗಳ ನಡುವೆ ದೊಡ್ಡ ಮಟ್ಟದ ಘರ್ಷಣೆಯನ್ನು ಉಂಟುಮಾಡಲು ಪ್ರೇರೇಪಿಸುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಆದ್ದರಿಂದ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ನಂಜೇಗೌಡ ಎಂಬ ವ್ಯಕ್ತಿಯ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕರಾದ ಶರತ್ ಎಸ್.ಎ. ಕಲ್ಯಾಣಿ ಹಾಗೂ ಸಹ-ಸಂಚಾಲಕರಾದ ದಿನೇಶ್ ಆಚಾರ್ಯ ಸೇರಿದಂತೆ ಪ್ರಮುಖರು ಇದ್ದರು. 

FIR Filed in Shivamogga Against Facebook User 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor