ಮನೆಗೆ ನುಗ್ಗಿ 7 ಲಕ್ಷ ರೂ ಕಳ್ಳತನ : ಘಟನೆ ನಡೆದ ನಾಲ್ಕೇ ದಿನದಲ್ಲಿ ಇಬ್ಬರು ಅರೆಸ್ಟ್​​

ಶಿವಮೊಗ್ಗ: ನಗರದ ಕಾಶೀಪುರದಲ್ಲಿರುವ ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ವಿನೋಬಾನಗರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಆಡಳಿತದಲ್ಲಿ ಗೊಂದಲವಾಗುವುದು ಗ್ಯಾರಂಟಿ, ಬಿ.ವೈ.ವಿಜಯೇಂದ್ರ

ಘಟನೆಯ ಹಿನ್ನೆಲೆ

ಕಳೆದ ಮೇ 26 ರಂದು ಕಾಶಿಪುರದ ಲಕ್ಕಪ್ಪ ಲೇಔಟ್ ನಿವಾಸಿಯಾದ ಸೋಮಶೇಖರ್ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳರು, ಬೀರುವಿನಲ್ಲಿದ್ದ ಸುಮಾರು 7 ಲಕ್ಷ ರೂಪಾಯಿ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮನೆ ಮಾಲೀಕ ಸೋಮಶೇಖರ್ ಅವರು ತಕ್ಷಣವೇ ವಿನೋಬಾನಗರ ಪೊಲೀಸ್ ಠಾಣೆಗೆ ತೆರಳಿದೂರು ದಾಖಲಿಸಿದ್ದರು. 

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡವು, ಕಳ್ಳತನ ನಡೆದ ಕೇವಲ ನಾಲ್ಕೇ ದಿನಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ

ಬಂಧಿತ ಆರೋಪಿಗಳನ್ನು ಮೊಹಮದ್ ಸಲೀಮ್ ಹಾಗೂ ಮೊಹಮದ್ ರಜಾಕ್ ಎಂದು ಗುರುತಿಸಲಾಗಿದ್ದು, ಸದ್ಯ ಇವರಿಂದ ಕಳ್ಳತನ ಮಾಡಲಾಗಿದ್ದ ನಗದಿನಲ್ಲಿ ಒಟ್ಟು 5,13,000 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Theft Case Vinoba Nagar Police Arrest Two Thieves