ತೀರ್ಥಹಳ್ಳಿ: ರಾತ್ರಿ ಮಲಗಿದ್ದ ಲೈನ್​ ಮ್ಯಾನ್​ ಬೆಳಿಗ್ಗೆ ಏಳಲೇ ಇಲ್ಲ, ಹೃದಯಾಘಾತದಿಂದ ಸಾವು

ಹಂಚಿಕೊಳ್ಳಿ
WhatsApp Facebook X Telegram
Mescom Lineman Passes Away due to Heart Attack
Mescom Lineman Passes Away due to Heart Attack

Mescom Lineman ತೀರ್ಥಹಳ್ಳಿ, ತಾಲೂಕಿನ ಕಟ್ಟೆಹಕ್ಕಲು ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದಮೆಸ್ಕಾಂ ಲೈನ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ  ಹಿರಿಯ ನೌಕರರೊಬ್ಬರು ನಿನ್ನೆ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬಳ್ಳಾರಿ ಮೂಲದ ಹೊಸಗೇರಪ್ಪ (50) ಮೃತಪಟ್ಟ ದುರ್ದೈವಿ.

ಶಿವಮೊಗ್ಗ: ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ; ಇನ್ಮುಂದೆ ಈ ಹೊಸ ನಿಯಮ ಕಡ್ಡಾಯ 

ಮೃತ ಹೊಸಗೇರಪ್ಪ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರಾಗಿದ್ದರೂ, ಕಳೆದ ಒಂದು ದಶಕದಿಂದ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ವ್ಯಾಪ್ತಿಯಲ್ಲಿಯೇ ವಾಸವಿದ್ದುಕೊಂಡು ಸಾರ್ವಜನಿಕರಿಗೆ ವಿದ್ಯುತ್ ಸೇವೆ ನೀಡುತ್ತಿದ್ದರು. ಎಂದಿನಂತೆ ನಿನ್ನೆ ತಮ್ಮ ಕಚೇರಿ ಕೆಲಸಗಳನ್ನು ಮುಗಿಸಿಕೊಂಡು ರಾತ್ರಿ ಮನೆಗೆ ಮರಳಿದ್ದ ಅವರು, ಊಟ ಮುಗಿಸಿ ಮಲಗಿದ್ದರು. 

ಇಂದು ಬೆಳಿಗ್ಗೆಯಾದರೂ ಹೊಸಗೇರಪ್ಪ ಅವರು ಏಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡದೆನಿದ್ರೆಯಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 

ರಾತ್ರಿ ಮಲಗಿದ್ದ ಅವಧಿಯಲ್ಲೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿರುವುದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ. 

Mescom Lineman Passes Away due to Heart Attack

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor