ಶಿವಮೊಗ್ಗ: ಹಿಜಾಬ್ ಆದೇಶ ವಿರೋಧಿಸಿ ಬಜರಂಗದಳ ಪ್ರತಿಭಟನೆ; ಬ್ಯಾರಿಕೇಡ್ ನೂಕಿ ಆಕ್ರೋಶ, ಕಾರ್ಯಕರ್ತರ ಬಂಧನ

Shivamogga Hijab Row ಶಿವಮೊಗ್ಗ: ರಾಜ್ಯ ಸರ್ಕಾರ ಹಿಜಾಬ್ ಧರಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಬಜರಂಗದಳದ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ರಸ್ತೆಯಲ್ಲಿ ಜಮಾಯಿಸಿದ 20ಕ್ಕೂ ಹೆಚ್ಚು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಷ್ಟೇ ಅಲ್ಲದೆ, ಕೆಡಿಪಿ ಸಭೆಯ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಥಳಕ್ಕೆ ಆಗಮಿಸಿ, ಹಿಜಾಬ್ ಆದೇಶವನ್ನು ಹಿಂಪಡೆಯುವುದಾಗಿ ಹೇಳುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಮೇ 20ರಂದು ಶಿವಮೊಗ್ಗದ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಇನ್ಮುಂದೆ ರಾಜ್ಯದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು: ರಾಜೇಶ್ ಗೌಡ

ಈ ಸಂದರ್ಭದಲ್ಲಿ ಬಜರಂಗದಳದ ಪ್ರಮುಖರಾದ ರಾಜೇಶ್ ಗೌಡ ಮಾತನಾಡಿ, ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗಲೇ ಅದಕ್ಕೆ ಅವಕಾಶ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಕಡೆಗಣಿಸಿರುವ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರು, ತಮ್ಮ ಎಡವಟ್ಟಿನಿಂದ ಮಕ್ಕಳಲ್ಲಿ ಕೋಮು ದ್ವೇಷ ಬಿತ್ತುತ್ತಿದ್ದಾರೆ. ಇದರ ನಡುವೆ ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳಲು ರುದ್ರಾಕ್ಷಿ ಹಾಕಿ, ಜನಿವಾರ ಹಾಕಿ ಎನ್ನುತ್ತಿದ್ದಾರೆ. ಶಿಕ್ಷಣ ಸಚಿವರೇ, ನೀವು ಕೂಡ ಒಬ್ಬ ಹಿಂದೂ ಆಗಿ ಹಿಜಾಬಿಗೂ ಮತ್ತು ರುದ್ರಾಕ್ಷಿಗೂ ವ್ಯತ್ಯಾಸವಿಲ್ಲವೇ? ಎಂದು ಪ್ರಶ್ನಿಸಿದರು.

ಅಷ್ಟೇ ಅಲ್ಲದೆ, ಈ ಕೂಡಲೇ ಹಿಜಾಬ್ ಆದೇಶವನ್ನು ಹಿಂಪಡೆಯದಿದ್ದರೆ, ಬರುವ ಜೂನ್ 1ರಿಂದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಗೂ ತ್ರಿಶೂಲ ನೀಡುತ್ತೇವೆ ಎಂದು ಎಚ್ಚರಿಸಿದರು.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ

ಇದೇ ಸಮಯದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಥಳಕ್ಕೆ ಆಗಮಿಸಿದರು. ಆದರೆ, ಇನ್ನೊಂದೆಡೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ತೆರಳಿ ಅವರ ಮನವಿಯನ್ನು ಸ್ವೀಕರಿಸಿದ ಸಚಿವರು, ಬಜರಂಗದಳದ ವಿದ್ಯಾರ್ಥಿ ಸಂಘಟನೆಯವರ ಮಾತನ್ನು ಆಲಿಸದೆಯೇ ಅಲ್ಲಿಂದ ತೆರಳಿದರು. ಇದರಿಂದಾಗಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಸಚಿವರ ನಡೆಗೆ ಆಕ್ರೋಶಗೊಂಡ ಬಜರಂಗದಳದ ಕಾರ್ಯಕರ್ತರು, ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ನೂಕಿ ಎಸೆದು, ಸಚಿವರೊಂದಿಗೆ ಮಾತನಾಡಲೇಬೇಕು ಎಂದು ಪಟ್ಟು ಹಿಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

Shivamogga Hijab Row Bajrang Dal Protests

Shivamogga Hijab Row Bajrang Dal Protests
Shivamogga Hijab Row Bajrang Dal Protests