ಶಿವಮೊಗ್ಗ : ನಾಳೆಯಿಂದ ಜಿಲ್ಲೆಯ ಸಕ್ರೆಬೈಲಿನಲ್ಲಿರುವ ಆನೆ ಬಿಡಾರ ಒಂದು ತಿಂಗಳ ಕಾಲ ಕ್ಲೋಸ್ ಆಗಲಿದೆ. ಇದರ ನಡುವೆ ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ-ಸಿಂಹ ಧಾಮ ಸಫಾರಿಗೆ ಆಗಮಿಸುವ ಪ್ರವಾಸಿಗರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ: ಯಾವಾಗಿನವರೆಗೆ ಗೊತ್ತಾ?https://malenadutoday.com/sakrebyle-elephant-camp-closed-for-tourists/
ಅದೇನೆಂದರೆ, ಸಾಮಾನ್ಯವಾಗಿ ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮದಲ್ಲಿ ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ. ಆದರೆ ಇದು ಹಾಲಿಡೇ ಮಂತ್ ಆಗಿರುವುದರಿಂದ ಹುಲಿ-ಸಿಂಹ ಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ, ವಿಶೇಷವಾಗಿ ದಿನಾಂಕ: 26.05.2026ರ ಮಂಗಳವಾರದಂದು ಹುಲಿ-ಸಿಂಹ ಧಾಮದಲ್ಲಿನ ಜೂ ಹಾಗೂ ಸಫಾರಿ ವೀಕ್ಷಣೆಯನ್ನು ತೆರೆದಿಡಲಾಗುತ್ತದೆ.
ಸಕ್ರೆಬೈಲು ಆನೆ ಬಿಡಾರ ಒಂದು ತಿಂಗಳ ಕಾಲ ಬಂದ್ ಆಗಿರುವುದರಿಂದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ತ್ಯಾವರೆಕೊಪ್ಪಕ್ಕೆ ಬರಬಹುದಾಗಿದೆ.
