ಶಿವಮೊಗ್ಗ : ಶಾದಿ ಡಾಟ್ ಕಾಂ ಮ್ಯಾಟ್ರಿಮೋನಿಯಲ್ ಆಪ್ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬರು ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 18 ಲಕ್ಷ ರೂಪಾಯಿ ಹಣವನ್ನು ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವಂಚಿಸಿರುವ ಘಟನೆ ನಡೆದಿದೆ.ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ
Cyber Crime ಘಟನೆ ವಿವರ
ದೂರುದಾರರು ಕಳೆದ ಫೆಬ್ರವರಿ 13ರಂದು ಶಾದಿ ಡಾಟ್ ಕಾಂ ಆಪ್ನಲ್ಲಿ ವಿಮರ್ಷಾ ಎಂಬ ಪ್ರೊಫೈಲ್ ಐಡಿಯನ್ನು ಗಮನಿಸಿದ್ದರು. ಅದರಲ್ಲಿ ಲಂಡನ್ ಮೂಲದ ಮೊಬೈಲ್ ನಂಬರ್ಗಳು ಲಭ್ಯವಿದ್ದವು. ಈ ಪೈಕಿ ಒಂದು ನಂಬರ್ ಅನ್ನು ಸೇವ್ ಮಾಡಿಕೊಂಡ ಸೂರುದಾರರು ವಾಟ್ಸ್ ಆಪ್ ಮೂಲಕ ಸಂಪರ್ಕ ಬೆಳೆಸಿದ್ದರು. ಚಾಟಿಂಗ್ ವೇಳೆ ಎದುರಿನ ವ್ಯಕ್ತಿ ತನ್ನ ಹೆಸರು ವಿಮರ್ಶ ಎಂದು, ತಾನು ಲಂಡನ್ನಲ್ಲಿ ಚಿಕ್ಕಪ್ಪನ ಜೊತೆ ವಾಸವಿರುವುದಾಗಿ ಪರಿಚಯ ಮಾಡಿಕೊಂಡಿದ್ದಾಳೆ.
ಪರಿಚಯ ವಾಗುತ್ತಿದ್ದಂತೆ ಆರೋಪಿಯು www.mivonexchange.com ಎಂಬ ವೆಬ್ಸೈಟ್ ಮೂಲಕ ಆನ್ಲೈನ್ ಟ್ರೇಡಿಂಗ್ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದಾಳೆ. ಟ್ರೇಡಿಂಗ್ ಪ್ರಕ್ರಿಯೆಗಾಗಿ ಹಣ ಹೂಡಿಕೆ ಮಾಡಲು ವಿವಿಧ ಬ್ಯಾಂಕ್ ಖಾತೆಗೆಳ ನಂಬರ್ನ್ನು ನೀಡಿದ್ದಾಳೆ.
ಅಪರಿಚಿತ ವ್ಯಕ್ತಿಯ ಮಾತುಗಳನ್ನು ನಂಬಿದ ದೂರುದಾರರು ಹಂತ ಹಂತವಾಗಿ ನಾಲ್ಕು ಬಾರಿ ತಮ್ಮ ಬ್ಯಾಂಕ್ ಖಾತೆಯಿಂದ ಒಟ್ಟು 18,00,000 ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ, ಹಣ ಜಮೆಯಾದ ಕೆಲ ದಿನಗಳ ನಂತರ ಸದರಿ ಟ್ರೇಡಿಂಗ್ ಖಾತೆಯನ್ನು ಡಿಆಕ್ಟಿವೇಟ್ ಮಾಡಲಾಗಿದೆ.
ಖಾತೆ ನಿಷ್ಕ್ರಿಯಗೊಂಡಿದ್ದರಿಂದ ಆತಂಕಗೊಂಡ ಸಂತ್ರಸ್ತರು ತಮ್ಮ ಸ್ನೇಹಿತರ ಬಳಿ ಈ ವಿಷಯವನ್ನು ಚರ್ಚಿಸಿದಾಗ, ತಾವು ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿ ತಮಗೆ ವಂಚಿಸಿರುವ ಅಪರಿಚಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಹಣವನ್ನು ವಾಪಸ್ ಕೊಡಿಸಬೇಕೆಂದು ಸಂತ್ರಸ್ತರು ಶಿವಮೊಗ್ಗ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
