SHIVAMOGGA NEWS TODAY

5 ಲಕ್ಷದ ಬೊಲೆರೋ ಪಿಕಾಪ್​ ತಂದು ಸ್ಟಿಕ್ಕರ್​ ಅಂಗಡಿಗೆ ಬಿಟ್ಟಿದ್ದಷ್ಟೇ, ಮಾರನೇ ದಿನ ಮಾಲೀಕನಿಗೆ ಕಾದಿತ್ತು ಶಾಕ್​ 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Bolero Pick Up ಶಿವಮೊಗ್ಗ : ನಗರದ ಊರುಗಡೂರು ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಬೊಲೆರೋ ಪಿಕ್‌ಅಪ್ ಗೂಡ್ಸ್ ವಾಹನವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಈ ಸಂಬಂಧತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಮೇಲೆ ಮೂರನೇ ಕಣ್ಣು: ಅಕ್ರಮ ಚಟುವಟಿಕೆಗಳಿಗೆ ಡ್ರೋನ್ ಹಾಗೂ ಸಿಸಿಟಿವಿ ಬ್ರೇಕ್!

ಶಿವಮೊಗ್ಗ ನಗರದ ಸೂಳೇಬೈಲ್ನ ದೂರುದಾರರು ಶಿಕಾರಿಪುರ ಮೂಲದ ವ್ಯಕ್ತಿಯೊಬ್ಬರಿಂದ  ಬಿಳಿ ಬಣ್ಣದ ಬೊಲೆರೋ ಪಿಕ್‌ಅಪ್ ಗೂಡ್ಸ್ ವಾಹನವನ್ನು ಖರೀದಿಸಿದ್ದರು. ವಾಹನ ಮಾಲೀಕರಿಗೆ 25,000 ರೂಪಾಯಿ ನಗದು ನೀಡಿ, ಚೋಳಮಂಡಲಂ ಫೈನಾನ್ಸ್‌ನಲ್ಲಿದ್ದ 4,68,000 ರೂಪಾಯಿ ಸಾಲದ ಮೊತ್ತವನ್ನು ಇವರೇ ಪಾವತಿಸಿದ್ದರು. ಈ ಮೂಲಕ ಒಟ್ಟು 4,93,000 ರೂಪಾಯಿ ವೆಚ್ಚದಲ್ಲಿ ಖರೀದಿಸಿದ್ದ ವಾಹನಕ್ಕೆ ಸ್ಟಿಕ್ಕರ್ ಹಾಕಿಸಲು ಶಿವಮೊಗ್ಗದ ಊರುಗಡೂರು ಬೈಪಾಸ್ ರಸ್ತೆಯಲ್ಲಿರುವ  ಸ್ಟಿಕ್ಕರ್​ ಅಂಗಡಿಯೊಂದಕ್ಕೆ ಬಿಡಲಾಗಿತ್ತು.

ರಾತ್ರಿ ಅಂಗಡಿ ಮುಚ್ಚುವ ಸಮಯದಲ್ಲೂ ವಾಹನ ಅಲ್ಲಿಯೇ ಇತ್ತು. ಆದರೆ, ಮಾರನೇ ದಿನ ಮುಂಜಾನೆ 5:30ರ ಸುಮಾರಿಗೆ ಅಂಗಡಿ ಮಾಲೀಕರಾದ ಇಸ್ರಾರ್ ಅಹಮದ್ ನೋಡಿದಾಗ ವಾಹನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಂಗಡಿ ಸಿಬ್ಬಂದಿ ಮೊಹಮದ್ ಅಬ್ದುಲಾ ಈ ವಿಷಯವನ್ನು ವಾಹನ ಮಾಲೀಕರಿಗೆ ತಿಳಿಸಿದ್ದಾರೆ. ಕಳುವಾದ ವಾಹನಕ್ಕಾಗಿ ಅಕ್ಕಪಕ್ಕ ಹಾಗೂ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಮಾಲೀಕರು ತುಂಗಾನಗರ ಠಾಣೆಗೆ ಬಂದು ದೂರು ನೀಡಿದ್ದಾರೆ. 

Bolero Pick Up Vehicle Stolen in Shivamogga

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.