ಮದರಿಪಾಳ್ಯದಲ್ಲಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಉತ್ತರಪ್ರದೇಶದ ತಾಯಿ & ಮಕ್ಕಳು! ಅಕ್ಕಪಡೆಯಿಂದ ಬದಲಾಯ್ತು ಸೀನ್!

ಹಂಚಿಕೊಳ್ಳಿ
WhatsApp Facebook X Telegram
Shimoga Akka Pade
Shimoga: Akka Pade Action Against Harasser in Hosamane

ಮಲೆನಾಡು ಟುಡೆ ಸುದ್ದಿ / ತುಂಗಾನಗರ / ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮದರಿಪಾಳ್ಯದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿರುವ ‘ಅಕ್ಕ ಪಡೆ’ ಪೊಲೀಸರು, ಅವರನ್ನು ಸುರಕ್ಷಿತವಾಗಿ ಆಶ್ರಯ ಕೇಂದ್ರಕ್ಕೆ ಸೇರಿಸಿದ್ದಾರೆ.

ತುಂಗಾಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ ಘಟನೆ

ಮದರಿಪಾಳ್ಯದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಭಿಕ್ಷಾಟನೆ ಮಾಡುತ್ತಿರುವ ಕುರಿತು ಅಕ್ಕ ಪಡೆಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಕ್ಕ ಪಡೆಯ ಪೊಲೀಸ್ ಸಿಬ್ಬಂದಿ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಿಕ್ಷಾಟನೆಯಲ್ಲಿ ತೊಡಗಿದ್ದ ಮಹಿಳೆ ಮತ್ತು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ ಸಿಬ್ಬಂದಿಗೆ ಕೆಲವು ಮಾಹಿತಿ ಲಭ್ಯವಾಗಿದೆ.

ಅಕ್ಕಪಡೆಯಿಂದ ಬದಲಾಯ್ತು ಸೀನ್!

ವಿಚಾರಣೆಯ ವೇಳೆ, ಈ ಕುಟುಂಬವು ಮೂಲತಃ ಉತ್ತರ ಪ್ರದೇಶದ ನಿವಾಸಿಗಳು ಎಂಬುದು ತಿಳಿದುಬಂದಿದೆ. ವಾಸಿಸಲು ಆಶ್ರಯವಿಲ್ಲದ ಕಾರಣದಿಂದಾಗಿ ಅವರು ಭಿಕ್ಷಾಟನೆಗಿಳಿದಿದ್ದರು. ಅವರ ಅಸಹಾಯಕ ಸ್ಥಿತಿಯನ್ನು ಮನಗಂಡ ಅಕ್ಕ ಪಡೆ, ತಾಯಿ ಮತ್ತು ಮಕ್ಕಳನ್ನು ರಕ್ಷಿಸಿದೆ. ಅವರನ್ನು ಸೋಮಿನಕೊಪ್ಪದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಆಶ್ರಯ ಕೇಂದ್ರ ‘ಶಕ್ತಿ ಸದನ’ಕ್ಕೆ ಕರೆದೊಯ್ದು, ಸೂಕ್ತ ಆಶ್ರಯ ಕಲ್ಪಿಸಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor