ರಾಮಣ್ಣ ಶೆಟ್ಟಿ ಪಾರ್ಕ್​ ಬಳಿ ಅನುಮಾಸ್ಪದವಾಗಿ ವರ್ತಿಸ್ತಿದ್ದವನ್ನ ವಿರುದ್ಧ ದಾಖಲಾಯ್ತು ಕೇಸ್!

ಹಂಚಿಕೊಳ್ಳಿ
WhatsApp Facebook X Telegram
ರಾಮಣ್ಣ ಶೆಟ್ಟಿ ಪಾರ್ಕ್
ಪತ್ನಿಯ ಜೊತೆ ಮಾತನಾಡಿದ್ದಕ್ಕೆ ಅಟೆಂಪ್ಟು ಮರ್ಡರ್ ಕೇಸ್ : ಕಾರು ಡಿಕ್ಕಿ ಹೊಡೆಸಿ ಕೊಲೆ ಯತ್ನ!

ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ ಎನ್ನುವ ಚರ್ಚೆ ಆಗುತ್ತಿರುವುದರ ನಡುವೆ ಶಿವಮೊಗ್ಗ ಪೊಲೀಸರು ಗಾಂಜಾ ಸೇವನೆ ಮಾಡುವವರ ವಿರುದ್ಧ ಆಕ್ಷನ್ ಚುರುಕುಗೊಳಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ, ಸಾರ್ವಜನಿಕ ಸ್ಥಳವೊಂದರಲ್ಲಿ ಅನುಮಾನಸ್ಪದವಾಗಿ ವರ್ತಿಸ್ತಿದ್ದ ಯುವಕನನ್ನು ವಶಕ್ಕೆ ಪಡೆದು ಆತನನ್ನು ಮೆಡಿಕಲ್​ ಟೆಸ್ಟ್​ಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ಆತನ ವಿರುದ್ಧ ಇದೀಗ ಕೇಸ್ ದಾಖಲಿಸಿದ್ದಾರೆ.

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಸೆಕ್ಷನ್ ಇಪ್ಪತ್ತೇಳು(ಬಿ) ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ದೊಡ್ಡಪೇಟೆ ಠಾಣೆಯ ಅಧಿಕಾರಿ ಚಂದ್ರ ನಾಯ್ಕ್ ಪಿ ಅವರು ಮತ್ತೊಬ್ಬ ಸಿಬ್ಬಂದಿಯೊಂದಿಗೆ ಗಾಂಧಿಬಜಾರ್, ಕುಂಬಾರಬೀದಿ, ರವಿವರ್ಮ ಬೀದಿ ಹಾಗೂ ಎಂ.ಕೆ.ಎ ರಸ್ತೆಗಳಲ್ಲಿ ಗಸ್ತು ತಿರುಗುತ್ತಿದ್ದರು.

ರಾಮಣ್ಣ ಶೆಟ್ಟಿ ಪಾರ್ಕ್ ಬಳಿ ಘಟನೆ

ಈ ವೇಳೆ ರಾಮಣ್ಣಶೆಟ್ಟಿ ಪಾರ್ಕ್ ಬಳಿಯ ಬೀಡಾ ಅಂಗಡಿಯ ಎದುರು ವ್ಯಕ್ತಿಯೊಬ್ಬ ಅಮಲಿನಲ್ಲಿದ್ದಂತೆ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಆತನ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ಆತ ಮಾದಕ ವಸ್ತು ಸೇವಿಸಿರುವ ಸಂಶಯ ವ್ಯಕ್ತವಾಗಿದೆ ವಿಚಾರಿಸಿದಾಗ ಯುವಕನು ಸಹ ಗಾಂಜಾ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದ. ಹಾಗಾಗಿ ಅಮಲಿನಲ್ಲಿ ಆತ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇದ್ದಿದ್ದರಿಂದ ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲದೆ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor