33,14,600 ರೂಪಾಯಿ ಕಳೆದುಕೊಂಡ ಬ್ರದರ್ಸ್​! ನಿಮ್ಮ ಜೊತೆಗೂ ಹೀಗೆ ಆಗಬಹುದು! ವಿಷಯ ತಿಳಿಯಿರಿ!

ಹಂಚಿಕೊಳ್ಳಿ
WhatsApp Facebook X Telegram
Shivamogga Cyber ScamThirthahalli Shivamogga Cyber Crime
Shivamogga Cyber ScamThirthahalli Shivamogga Cyber Crime

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಿಕ್ಕಾಪಟ್ಟೆ ದುಡ್ಡು ಸಿಗುತ್ತೆ ಅಂತಾ ಆಸೆ ತೋರಿಸಿ ಕುಟುಂಬವೊಂದಕ್ಕೆ ಬರೋಬ್ಬರಿ 33,14,600 ರೂಪಾಯಿಗಳನ್ನು ವಂಚಿಸಿರುವ ಬಗ್ಗೆ ಎಫ್​ಐಆರ್​ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ನಿವಾಸಿ ಹಾಗೂ ವೃತ್ತಿಯಲ್ಲಿ ಟೈಲರ್ ಆಗಿರುವ 30 ವರ್ಷದ ರಘು (ಹೆಸರು ಬದಲಾಯಿಸಲಾಗಿದೆ) ಎಂಬವರು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್​ ದಾಖಲಿಸಿದ್ದಾರೆ. ಅಪರಿಚಿತ ಫೋನ್​ ನಂಬರ್​ನಿಂದ ಬಂದಿದ್ದ ಮೇಸೆಜ್​ ಒಂದನ್ನ ಗಮನಿಸಿದ ದೂರುದಾರರನ್ನು ಆ ಮೆಸೇಜ್​ ಕಳುಹಿಸಿದ ವ್ಯಕ್ತಿಯು ತನ್ನನ್ನು ಇನ್ವೆಸ್ಕೊ ಲಿಮಿಟೆಡ್ (ಇನ್ವೆಸ್ಕೊ ಇಂಡಿಯಾ ಫೈನಾನ್ಷಿಯಲ್ ರಿಪೋರ್ಟ್ ಡಿಕೋಡಿಂಗ್ ಗ್ರೂಪ್) ಸಂಸ್ಥೆಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ.

ನಿಮ್ಮ ಜೊತೆಗೂ ಹೀಗೆ ಆಗಬಹುದು! ವಿಷಯ ತಿಳಿಯಿರಿ!

ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ದೂರುದಾರರನ್ನು ಹಾಗೂ ಅವರ ಸಹೋದರರನ್ನು ನಂಬಿಸಿದ್ದ. ಇದನ್ನು ನಿಜವೆಂದು ನಂಬಿದ ದೂರುದಾರರು, ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ. ಅಲ್ಲದೆ ವೆರಿಫಿಕೇಶನ್ ಪ್ರೊಸೆಸ್ ಚಾರ್ಜಸ್, ಸರ್ವೀಸ್ ಚಾರ್ಜಸ್ ಮತ್ತು ತೆರಿಗೆಯಂತಹ ವಿವಿಧ ಕಾರಣ ಹೇಳಿ ವಂಚಕರು ಹಣ ಪಡೆದಿದ್ದಾರೆ.

ಒಟ್ಟು 11 ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಆರ್.ಟಿ.ಜಿ.ಎಸ್ ಹಾಗೂ ಯು.ಪಿ.ಐ ಮೂಲಕ ಒಟ್ಟು 33,14,600 ರೂಪಾಯಿಗಳನ್ನು ವಂಚಕರ ಖಾತೆಗಳಿಗೆ ಜಮಾ ಮಾಡಲಾಗಿತ್ತು. ಇಷ್ಟೊಂದು ದೊಡ್ಡ ಮೊತ್ತವನ್ನು ವರ್ಗಾವಣೆ ಮಾಡಿದರೂ ಯಾವುದೇ ಲಾಭಾಂಶದ ಹಣ ಕೈಸೇರಿರಲಿಲ್ಲ. ವಂಚಕರು ಮತ್ತೆ ಮತ್ತೆ ಹಣ ಪಾವತಿಸುವಂತೆ ಒತ್ತಾಯಿಸಿದಾಗ ಅನುಮಾನಗೊಂಡ ದೂರುದಾರರು, ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಆಗ ಅವರು ಮೋಸಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ದ ಸೆಕ್ಷನ್ 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 318(4) ಮತ್ತು 319(2) ಅಡಿಯಲ್ಲಿ ಅಪರಿಚಿತರ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸ್ತಿದ್ದಾರೆ.

33,14,600 ರೂಪಾಯಿ ಕಳೆದುಕೊಂಡ ಬ್ರದರ್ಸ್​! ನಿಮ್ಮ ಜೊತೆಗೂ ಹೀಗೆ ಆಗಬಹುದು! ವಿಷಯ ತಿಳಿಯಿರಿ!
Bhadravati Cyber Crime Man Loses Rs 98,000

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor