ಶಿರಾಳಕೊಪ್ಪ / ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ಲಿಮಿಟ್ಸ್, ಸರ್ಕಾರಿ ಮನೆ ಮಂಜೂರು ಮಾಡಿಸಿಕೊಡುವುದಾಗಿ ಮೋಸ ಮಾಡಿರುವ ಆರೋಪ ಸಂಬಂಧ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪ್ಲೆಂಟ್ ಆದ ಸರ್ಕಾರಿ ಮನೆ ಮಂಜೂರಿನ ಕಥೆ
ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡಾದ ನಿವಾಸಿ, 48 ವರ್ಷದ ರೈತ ಶಂಕರನಾಯ್ಕ ನೀಡಿದ ದೂರಿನನ್ವಯ ಈ ಕೇಸ್ ದಾಖಲಾಗಿದೆ. ಮಾಜಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ವ್ಯಕ್ತಿಯೊಬ್ಬರ ವಿರುದ್ಧ ಕೇಸ್ ದಾಖಲಾಗಿದೆ.
ಆರೋಪಿಯು ಶಂಕರ್ ನಾಯ್ಕರಿಗೆ ಪರಿಚಯಸ್ಥನಾಗಿದ್ದು, ಈ ಪರಿಚಯದ ಮೇರೆಗೆ ಸರ್ಕಾರದಿಂದ ನಿಮ್ಮ ಹೆಸರಿಗೆ ಮನೆ ಮಂಜೂರಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದನಂತೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತನಗೆ ಪರಿಚಯಸ್ಥರಿದ್ದು, ಮೇಲಾಧಿಕಾರಿಗಳಿಗೆ ಹಣಕೊಟ್ಟು ಮನೆ ಮಂಜೂರು ಮಾಡಿಸುತ್ತೇನೆ ಎಂದಿದ್ದನಂತೆ.
ಈ ಮಾತುಗಳನ್ನ ನಂಬಿದ್ದ ಶಂಕರನಾಯ್ಕ ಅವರು, ಆರೋಪಿಗೆ ಫೋನ್‌ಪೇ ಹಾಗೂ ಬ್ಯಾಂಕ್ ಥ್ರೂ ಒಟ್ಟಾರೆ 81,000 ರೂಪಾಯಿಗಳನ್ನು ನೀಡಿದ್ದಾರೆ. ಆದರೆ ದುಡ್ಡು ಕೊಟ್ಟ ಬಳಿಕ ಮನೆ ಮಂಜೂರಾತಿಯ ಪ್ರಕ್ರಿಯೆಯ ಕುರಿತು ವಿಚಾರಿಸಿದಾಗ ಆರೋಪಿ ಬಗ್ಗೆ ಸಂಶಯ ಮೂಡಿದೆ. ಅಲ್ದೆ ಈ ಘಟನೆ ಬಳಿಕ ಆರೋಪಿ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದರ್ಜ್ ಮಾಡಿದ್ದಾರೆ. ಇದೀಗ ತನಿಖೆ ಮುಂದುವರಿದಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
