ತೀರ್ಥಹಳ್ಳಿ, ವ್ಯಾಪಾರಿ ಮಂಗಳೂರಿಗೆ ತೆರಳಿದ್ದಾಗ ನಡೀತು ಘಟನೆ, ಲಕ್ಷಾಂತರ ಮೌಲ್ಯದ ಮಾಲು ನಾಪತ್ತೆ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

Shadowy Midnight Raid ತೀರ್ಥಹಳ್ಳಿ: ತಾಲೂಕಿನ ರಂಜದಕಟ್ಟೆ ಸಮೀಪದ ದೂರ್ವಾಸಪುರದಲ್ಲಿ ಚಿಲ್ಲರೆ ಅಡಿಕೆ ವ್ಯಾಪಾರಿಯೊಬ್ಬರ ಗೋದಾಮಿಗೆ ಕಳ್ಳರು ನುಗ್ಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಅಡಿಕೆಯನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಕಲ್ಯಾಣ ಮಂಟಪದಲ್ಲಿ ಚಿನ್ನ ಕಳ್ಳತನ ಮಾಡಿದ್ದ ಖದೀಮರು ಕೇವಲ 6 ಗಂಟೆಯಲ್ಲಿ ಅರೆಸ್ಟ್!

ದೂರುದಾರರಾದ ಮೊಹಮ್ಮದ್ ಅಶ್ರಪ್ ಬಿನ್ ಇದಿನಬ್ಬ ಅವರು ಕಳೆದ ಎರಡು ವರ್ಷಗಳಿಂದ ರಂಜದಕಟ್ಟೆಯಲ್ಲಿ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದಾರೆ. ಇವರು ಭೀಮನಕಟ್ಟೆ ಮಠಕ್ಕೆ ಸೇರಿದ ಹಳೆಯ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಅಡಿಕೆ ದಾಸ್ತಾನು ಮಾಡುತ್ತಿದ್ದರು. ಏಪ್ರಿಲ್ 29ರಂದು ಅಶ್ರಪ್ ಅವರು ಮಂಗಳೂರಿಗೆ ನೆಂಟರ ಮನೆಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಖದೀಮರು ಈ ಕೃತ್ಯ ಎಸಗಿದ್ದಾರೆ. 

ಮೇ 4ರಂದು ಮಧ್ಯಾಹ್ನ ಅಶ್ರಪ್ ಅವರು ಗೋದಾಮಿಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಪತ್ತೆಯಾಗಿದೆ. ಗೋದಾಮಿನ ಹಿಂಬದಿಯ ಮರದ ಬಾಗಿಲನ್ನುಒಡೆದು, ಒಳಗಿನ ಚಿಲಕವನ್ನು ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ. ಸುಮಾರು 3 ಕ್ವಿಂಟಾಲ್ ತೂಕದ 8 ಮೂಟೆ ಒಣ ಅಡಿಕೆಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. 

ಕಳುವಾದ ಒಣ ಅಡಿಕೆಯ ಅಂದಾಜು ಮೌಲ್ಯ ಸುಮಾರು 1,25,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಏಪ್ರಿಲ್ 29 ರಿಂದ ಮೇ 4ರ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಹಾಗೂ ಕಳುವಾದ ಮಾಲಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Shadowy Midnight Raid What Happened Inside

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor