ಮಾರಿದಿಬ್ಬ ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಶಿವಮೊಗ್ಗದ ಒಡ್ಡಿನಕೊಪ್ಪ ನಿವಾಸಿ ಮಧುಸೂದನ್ ಮೃತದೇಹ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram
Shivamogga
Shivamogga

ನರಸಿಂಹರಾಜಪುರ: ಭೈರಾಪುರ ಗ್ರಾಮದ ಮಾರಿ ದಿಬ್ಬದ ಸಮೀಪ ಭದ್ರಾ ಹಿನ್ನೀರಿನಲ್ಲಿ ಭಾನುವಾರ ನಾಪತ್ತೆಯಾಗಿದ್ದ ಶಿವಮೊಗ್ಗ ತಾಲೂಕು ಒಡ್ಡಿನಕೊಪ್ಪ ನಿವಾಸಿ ಮಧು ಸೂದನ್ (44) ಅವರ ಶವ ನಿನ್ನೆ ಸೋಮವಾರ ಪತ್ತೆಯಾಗಿದೆ.

ಭದ್ರಾ ಹಿನ್ನೀರಿನಲ್ಲಿ ನಡೆದಿದ್ದೇನು

ಭಾನುವಾರ ಮಧುಸೂದನ್ ಅವರು ಸಹೋದರಿ ಮಮತಾ ಹಾಗೂ ಅವರ ಕುಟುಂಬದವರೊಂದಿಗೆ ಮಾರಿದಿಬ್ಬದ ಸಮೀಪ ಭದ್ರಾ ಹಿನ್ನೀರು ನೋಡಲು ಹೋಗಿದ್ದರು. ಈ ವೇಳೆ ಮಧುಸೂದನ್ ಹಿನ್ನೀರಿನಲ್ಲಿ ಈಜಾಡುತ್ತಾ ಮುಂದೆ ಸಾಗಿದ್ದು ಇದ್ದಕ್ಕಿದ್ದಂತೆ ಮುಳುಗಿ ನಾಪತ್ತೆ ಯಾಗಿದ್ದರು. ಸಹೋದರಿ ಮಮತಾ ಹಾಗೂ ಅವರ ಕುಟುಂಬದವರು ಹುಡು ಕಾಡಿ ದರೂ ಮಧುಸೂದನ್ ಪತ್ತೆಯಾಗಿಲ್ಲ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪಿಎಸ್‌ಐ ಡಿ.ಇ.ನೂತನ್ ಅವರು ಅಗ್ನಿ ಶಾಮಕದಳದ ಸಿಬ್ಬಂದಿ ಯೊಂದಿಗೆ ಸ್ಥಳಕ್ಕೆ ಧಾವಿಸಿ ಹಿನ್ನೀರಿನಲ್ಲಿ ಶೋಧ ಕಾರ್ಯ ನಡೆಸಿದರು. ರಾತ್ರಿ ಯಾಗಿದ್ದರಿಂದ ಕಾರ್ಯಾಚರಣೆ ನಿಲ್ಲಿಸಿದ್ದರು.

ಸೋಮವಾರ ಬೆಳಗ್ಗೆ 7.30ರ ವೇಳೆಗೆ ಮಧುಸೂದನ್ ಅವರ ಮೃತದೇಹ ಹಿನ್ನೀರಿನಲ್ಲಿ ತೇಲುತ್ತಿದ್ದು, ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ನೀರಿನಿಂದ ಹೊರತೆಗೆಯಲಾಯಿತು.

ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಮೃತದೇಹ ವನ್ನು ಹಸ್ತಾಂತರಿಸಲಾಯಿತು. ಸಹೋದರಿ ಮಮತಾ ನೀಡಿದ ದೂರು ಆಧರಿಸಿ ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಿದಿಬ್ಬ ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಶಿವಮೊಗ್ಗದ ಒಡ್ಡಿನಕೊಪ್ಪ ನಿವಾಸಿ ಮಧುಸೂದನ್ ಮೃತದೇಹ ಪತ್ತೆ Shivamogga Man Drowns in Bhadra Backwaters Near NR Pura, Body Recovered
ಮಾರಿದಿಬ್ಬ ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಶಿವಮೊಗ್ಗದ ಒಡ್ಡಿನಕೊಪ್ಪ ನಿವಾಸಿ ಮಧುಸೂದನ್ ಮೃತದೇಹ ಪತ್ತೆ Shivamogga Man Drowns in Bhadra Backwaters Near NR Pura, Body Recovered

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor