ಶಿವಮೊಗ್ಗದಲ್ಲಿ ವರುಣನ ಆರ್ಭಟ : ಇರಾನ್​ ಯುದ್ಧವನ್ನ ನೆನಪಿಸಿದ ಸಿಡಿಲು ಗುಡುಗು!

ಶಿವಮೊಗ್ಗದಲ್ಲಿ ವರುಣನ ಆರ್ಭಟ : ಇರಾನ್​ ಯುದ್ಧವನ್ನ ನೆನಪಿಸಿದ ಸಿಡಿಲು ಗುಡುಗು!

ಶಿವಮೊಗ್ಗ ಜನತೆಗೆ ನಿನ್ನೆ ಮಳೆ ರಿಲೀಫ್ ಕೊಟ್ಟಿದೆ. ಸೆಖೇಯಲ್ಲಿ ಬೇಯುತ್ತಿದ್ದ ಮಲೆನಾಡಿಗೆ ವರುಣ ತಂಪೆರಿದಿದ್ದಾನೆ. ಆದರೆ ಮಳೆ ಸುರಿದ ರೀತಿ ಮಾತ್ರ ಆತಂಕವನ್ನೆ ಮೂಡಿಸಿತ್ತು. ಮನೆ ಬಾಗಿಲಿಗೆ ಸಿಡಿಲು ಬಡಿಯಿತು ಎಂಬಷ್ಟರ ಮಟ್ಟಿಗೆ ಲಟಲಟ ಎಂಬ ಸದ್ದು ಕಿವಿಗೆ ರಾಚುತ್ತಿತ್ತು. ಸದ್ಯ ನಡೆಯುತ್ತಿರುವ ಇರಾನ್ ಸಂಘರ್ಷದ ವಿಡಿಯೋಗಳಲ್ಲಿ ಕಾಣುವಂತೆ ಶಿವಮೊಗ್ಗದ ಮೇಲೆ ಮಿಸೈಲ್ ಅಟ್ಯಾಕ್ ಆಗುತ್ತಿದೆಯೇನೋ ಎಂಬಂತೆ ಸಿಡಿಲು ಬಡಿಯುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರ ಪೂರ್ಣ ವಿಡಿಯೋ ಇಲ್ಲಿದೆ.

ಇನ್ನೂ ಕಳೆದೆರಡು ತಿಂಗಳಿನಿಂದ ಬಿಸಿಲಿನ ಬೇಗೆಗೆ ಬೆಂದು ಬೆಂಗಾಡಾಗಿದ್ದ ಶಿವಮೊಗ್ಗ ಜಿಲ್ಲೆಗೆ ಭಾನುವಾರ ಸಂಜೆ ಸುರಿದ ಭಾರಿ ಮಳೆ ತಂಪೆರೆದಿದೆ. ಸಂಜೆಯಿಂದಲೇ ಶುರುವಾದ ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ ಹಾಗೂ ವಾತಾವರಣ ಕೂಲ್ ಕೂಲ್ ಆಗಿದೆ.

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಕೈಮರ ಹಾಗೂ ಅರಹತೊಳಲು ಗ್ರಾಮಗಳ ನಡುವಿನ ಸಂಪರ್ಕ ರಸ್ತೆಯಲ್ಲಿ ಬಿರುಗಾಳಿಯ ರಭಸಕ್ಕೆ ಅಪಾರ ಪ್ರಮಾಣದ ಅಡಕೆ ಮರಗಳು ಮುರಿದು ರಸ್ತೆಗೆ ಉರುಳಿ ಬಿದ್ದಿವೆ.

ನಿಮ್ಮ ಊರಿನಲ್ಲಿ ಮಳೆಯ ಪರಿಸ್ಥಿತಿ ಹೇಗಿದೆ? ಮಳೆಯಿಂದ ಲಾಭವಾಗಿದೆಯೋ ಅಥವಾ ನಷ್ಟವಾಗಿದೆಯೋ? ನಮಗೆ ತಿಳಿಸಿ. ನಿಖರ ಹಾಗೂ ವಿಸ್ತೃತ ಸುದ್ದಿಗಳಿಗಾಗಿ ‘ಮಲೆನಾಡು ಟುಡೆ’ ಚಾನಲ್ ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಕ್ಲಿಕ್ ಮಾಡಿ.

ಶಿವಮೊಗ್ಗ ಮಳೆ, ಭದ್ರಾವತಿ ಮಳೆ ಅನಾಹುತ, ಹೊಳೆಹೊನ್ನೂರು ಬಿರುಗಾಳಿ, ಅಡಕೆ ಮರ ಧರೆಗೆ, ಮಲೆನಾಡು ಟುಡೆ, ರೈತರಿಗೆ ನಷ್ಟ, ವಾಹನ ಸಂಚಾರ ಸ್ಥಗಿತ, Shivamogga Rain, Bhadravati weather, Arecanut crop loss, Malenadu Today, Karnataka rain update.#RainRelief, #WeatherUpdate, #Monsoon2026, #KarnatakaNewsLive, #ViralNewsKarnataka, #TrendingNow, #FarmerSupport, #ClimateAction, #ReelsIndia, #ExplorePage