ಗೃಹ ಸಚಿವರಿಗೆ ಸಂಕಷ್ಟ ತಂದ ಕಬಡ್ಡಿ ಪಂದ್ಯ: FIR ದಾಖಲಿಸಿ ತನಿಖೆಗೆ ಕೋರ್ಟ್ ಸೂಚನೆ! ಏನಿದು ವಿಚಾರ ಓದಿ

ಹಂಚಿಕೊಳ್ಳಿ
WhatsApp Facebook X Telegram
Govt Committed to Filling 8000 Police Vacancies: Dr. G. Parameshwara in Assembly | Malenadu Today ಪೊಲೀಸ್ ಇಲಾಖೆಯಲ್ಲಿ ಹಾಗೂ 8,000 ಕಾನ್‌ಸ್ಟೇಬಲ್‌ಗಳ ನೇಮಕಕ್ಕೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಗೃಹ ಸಚಿವ.ಡಾ.ಜಿ.ಪರಮೇಶ್ವರ್
Govt Committed to Filling 8000 Police Vacancies: Dr. G. Parameshwara in Assembly | Malenadu Today ಪೊಲೀಸ್ ಇಲಾಖೆಯಲ್ಲಿ ಹಾಗೂ 8,000 ಕಾನ್‌ಸ್ಟೇಬಲ್‌ಗಳ ನೇಮಕಕ್ಕೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಗೃಹ ಸಚಿವ.ಡಾ.ಜಿ.ಪರಮೇಶ್ವರ್

ಇದೊಂದು ಅಪರೂಪದ ಪ್ರಕರಣ, ತುಮಕೂರಿನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್​ ವಿರುದ್ಧ ಇದೀಗ ಬೆಟ್ಟಿಂಗ್​ ಪ್ರಕರಣ ದಾಖಲಿಸುವಂತೆ ಕೋರ್ಟ್​ ಸೂಚಿಸಿದೆ.

ಕಬ್ಬಡಿ ಮ್ಯಾಚ್​​ನಲ್ಲಿ ಅನಧಿಕೃತ ಬೆಟ್ಟಿಂಗ್ ಕಟ್ಟಿ ಸಣ್ಣ ಸಂಘಟಿತ ಅಪರಾಧ ಕೃತ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಗೃಹಸಚಿವ ಜಿ.ಪರಮೇಶ್ವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಎಂದು ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.

ಗೃಹ ಸಚಿವರಿಗೆ ಸಂಕಷ್ಟ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹಂದ್ರಾಳು ಗ್ರಾಮದ ಎಚ್.ಆರ್.ನಾಗಭೂಷಣ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ. ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಈ ಕುರಿತಂತೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣಾಧಿಕಾರಿಗೆ ಆದೇಶಿಸಿದ್ದಾರೆ. ಅಲ್ಲದೆ ಎಫ್‌ಐಆರ್ ಸಿದ್ಧಪಡಿಸಿ ಕಳುಹಿಸುವಂತೆ ನಿರ್ದೇಶಿಸಿದ್ದಾರೆ.

ಪಂದ್ಯದಲ್ಲಿ ಸಚಿವ ಪರಮೇಶ್ವರ್ 2025ರ ಅಕ್ಟೋಬರ್ 19ರಂದು ತುಮಕೂರು ನಗರದಲ್ಲಿ ಕಬ್ಬಡಿ ಪಂದ್ಯಾವಳಿ ನಡೆದಿತ್ತು. ಈ ವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದ ವಿರುದ್ಧ ಜಿ. ಪರಮೇಶ್ವರ್ 2500 ಬೆಟ್ಟಿಂಗ್ ಕಟ್ಟುವ ಮೂಲಕ ಅಪರಾಧ ಕೃತ್ಯಗಳನ್ನು ಎಸಗಲು ಸಾರ್ವಜನಿಕವಾಗಿ ಪ್ರಚೋದನೆ ನೀಡಿದ್ದಾರೆ. ಅವರ ವಿರುದ್ಧ ಕೇಸ್​ ದಾಖಲಿಸಬೇಕು. ಹಾಗೂ ಈ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿರುದ್ಧವೂ ಕರ್ನಾಟಕ ಪೊಲೀಸ್ ಹಾಗೂ ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿ ಖಾಸಗಿ ದೂರು ಸಲ್ಲಿಸಿದ್ದರು.

ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ಕೊಡಿಗೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ದೂರು ಆಧಾರರಹಿತ, ಇದರಲ್ಲಿ ಸಾಕ್ಷ್ಯದ ಕೊರತೆ ಇದೆ ಎಂಬ ಕಾರಣ ನೀಡಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದರು. ಈ ಸಂಬಂಧ ದೂರುದಾರರು ಮಧುಗಿರಿ ಡಿವೈಎಸ್‌ಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರೂ ಪ್ರಯೋ ಜನವಾಗಿರಲಿಲ್ಲ. ಇದೀಗ ಕೋರ್ಟ್ ಎಫ್​ಐಆರ್​ ದಾಖಲಿಸುವಂತೆ ಸೂಚಿಸಿದೆ.

 court direct the police to file an FIR against Home Minister G Parameshwara  : ಗೃಹ ಸಚಿವರಿಗೆ ಸಂಕಷ್ಟ ತಂದ ಕಬಡ್ಡಿ ಪಂದ್ಯ: ಬೆಟ್ಟಿಂಗ್ ಆರೋಪದಡಿ ತನಿಖೆಗೆ ಕೋರ್ಟ್ ಸೂಚನೆ
 court direct the police to file an FIR against Home Minister G Parameshwara  : ಗೃಹ ಸಚಿವರಿಗೆ ಸಂಕಷ್ಟ ತಂದ ಕಬಡ್ಡಿ ಪಂದ್ಯ: ಬೆಟ್ಟಿಂಗ್ ಆರೋಪದಡಿ ತನಿಖೆಗೆ ಕೋರ್ಟ್ ಸೂಚನೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor