ಗ್ರಹಗಳ ಚಲನೆ ಹಾಗೂ ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ ಇಂದಿನ (ಏಪ್ರಿಲ್ 23, 2026) ದ್ವಾದಶ ರಾಶಿಗಳ ಫಲಾಫಲ ಹಾಗೂ ಪಂಚಾಂಗದ ವಿವರ ಇಲ್ಲಿದೆ.
ಇಂದಿನ ಪಂಚಾಂಗ
ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಸಪ್ತಮಿ (ರಾತ್ರಿ 1.42 ರವರೆಗೆ, ನಂತರ ಅಷ್ಟಮಿ) ಪುನರ್ವಸು ನಕ್ಷತ್ರದ ಈ ದಿನ ಅಮೃತ ಘಳಿಗೆ ರಾತ್ರಿ 11.24 ರಿಂದ 12.54 ರವರೆಗೆ ಇರಲಿದೆ. ರಾಹುಕಾಲ: ಮಧ್ಯಾಹ್ನ 1.30 ರಿಂದ 3.00 ರವರೆಗೆ, ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.
ಇಂದಿನ ದಿನ ಭವಿಷ್ಯ
ಮೇಷ / ಹೊಸ ಪರಿಚಯಗಳಾಗಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವಿವಾದ ಬಗೆಹರಿಯಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿನ ಒತ್ತಡ ನಿವಾರಣೆಯಾಗುತ್ತವೆ.
ವೃಷಭ / ಶ್ರಮ ಹೆಚ್ಚಾಗಲಿದೆ. ಅನಗತ್ಯ ಧನವ್ಯಯ. ಭಿನ್ನಾಭಿಪ್ರಾಯ ಬರಬಹುದು. ದೇವಾಲಯಗಳಿಗೆ ಭೇಟಿ ನೀಡುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ
ಮಿಥುನ / ಶುಭ ಕಾರ್ಯ. ವಾಹನ ಖರೀದಿಯೋಗವಿದೆ. ಕುಟುಂಬ ಸದಸ್ಯರೊಂದಿಗೆ ಅನ್ಯೋನ್ಯತೆ ಮೂಡಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ತೃಪ್ತಿ
ಕರ್ಕಾಟಕ / ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಧನವ್ಯಯವಾಗಲಿದೆ ಹಾಗೂ ಶ್ರಮ ಹೆಚ್ಚಾಗುತ್ತದೆ. ಆರ್ಥಿಕ ವ್ಯವಹಾರಗಳಲ್ಲಿ ನಿರಾಸೆ ಮೂಡಬಹುದು. ಉದ್ಯೋಗ ಮತ್ತು ವ್ಯಾಪಾರ ಸಾಧಾರಣವಾಗಿರುತ್ತವೆ.
ಸಿಂಹ / ಕುತೂಹಲದ ದಿನ, ವಾಹನ ಯೋಗ, ಕೈಹಾಕಿದ ಕೆಲಸಗಳಲ್ಲಿ ಪ್ರಗತಿ, ನಿಮ್ಮದೇ ಮೇಲುಗೈ . ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಉತ್ಸಾಹದಿಂದ ಸಾಗುತ್ತದೆ.
ಕನ್ಯಾ / ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ. ಆರ್ಥಿಕವಾಗಿ ಅಭಿವೃದ್ಧಿ . ವ್ಯವಹಾರ ಅನುಕೂಲಕರವಾಗಿರುತ್ತವೆ. ಉದ್ಯೋಗ ಮತ್ತು ವ್ಯಾಪಾರ ಆಶಾದಾಯಕವಾಗಿರುತ್ತವೆ.
ತುಲಾ / ಆರ್ಥಿಕ ವಹಿವಾಟು ಮಂದಗತಿಯಲ್ಲಿರುತ್ತವೆ. ಅನಿರೀಕ್ಷಿತ ಧನವ್ಯಯ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಪುಣ್ಯಕ್ಷೇತ್ರಗಳಿಗೆ ಭೇಟಿ . ಉದ್ಯೋಗ ಮತ್ತು ವ್ಯಾಪಾರದಲ್ಲಿ ಮಹತ್ತರ ಬದಲಾವಣೆ.
ವೃಶ್ಚಿಕ / ಆರ್ಥಿಕ ವಹಿವಾಟು ನಿರಾಸೆ ಮೂಡಿಸುತ್ತವೆ. ಧನವ್ಯಯ, ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ . ದೇವಾಲಯಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ .
ಧನುಸ್ಸು / ಸಕಾಲ, ವ್ಯವಹಾರಗಳಲ್ಲಿ ಯಶಸ್ಸು , ಶುಭ ಕಾರ್ಯ, ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಪ್ರಗತಿ .
ಮಕರ / ಉದ್ಯೋಗಾವಕಾಶ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸಮಾಜದಲ್ಲಿ ಮನ್ನಣೆ ಸಿಗಲಿದೆ. ಉದ್ಯೋಗ, ವ್ಯಾಪಾರದ ಅಡೆತಡೆ ನಿವಾರಣೆಯಾಗುತ್ತವೆ.
ಕುಂಭ / ಕೆಲಸಗಳಲ್ಲಿ ವಿಳಂಬ. ಆರ್ಥಿಕ ಪರಿಸ್ಥಿತಿ ಚೇತರಿಕೆ, ಖರ್ಚು ಮತ್ತು ಶ್ರಮ ಹೆಚ್ಚಾಗಲಿದೆ. ವಿವಾದ ಉಂಟಾಗಬಹುದು. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಸಾಮಾನ್ಯ ದಿನ.
ಮೀನ / ಧನವ್ಯಯವಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗಬಹುದು. ಅನಾರೋಗ್ಯ ಕಾಡಬಹುದು. ಉದ್ಯೋಗ ವ್ಯಾಪಾರಗಳಲ್ಲಿ ಒತ್ತಡ ಹೆಚ್ಚಾಗಲಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.